ಈ ಆಂಟಿ ಅನ್ನೋ ಪದ ಕೇಳಿದ್ರೆ ಏನೋ ಮುಜುಗರ ಕಣ್ರೀ... ಈ ನಮ್ ಬೆಂಗಳೂರಲ್ಲಿ ಯಾರ್ ನೋಡಿದ್ರೂ ಆಂಟಿ ಅಂತಾನೆ ಸಂಭೋದನೆ ಮಾಡ್ತಾರಲ್ಲಾ, ಇವ್ರಿಗೇನ್ ಅಷ್ಟೂ ಗೊತಾಗಲ್ವೇನ್ರೀ ನಾವಿನ್ನು ಹುಡ್ಗೀರು ಅಂತ...!! ನಮ್ಕಿಂತ ಎಷ್ಟೋ ದೊಡ್ಡ ಮಂದಿ ನಮ್ಮನ್ನ ಆಂಟಿ ಅಂತ ಕರೆದ್ರೆ ನಮ್ಮ ಪರಿಸ್ಥಿತಿ ಹೇಗಾಗಿರಬೇಡ....!
ಬಿಡಿ ಈಗ ವಿಷಯಕ್ಕೆ ಬರೋಣ... ಈ ದೊಡ್ಡ ಸಿಟಿಗಳಲ್ಲಿ ಆಂಟಿಯರಂಥ ಆಂಟಿಯರು ಹೇಗಿರ್ತಾರೆ...? ಕೇಳ್ತಿದ್ದ ಹಾಗೇ ನಿಮ್ಗೆ ಕಣ್ಣ್ಮುಂದೆ ಒಂದು ಆಂಟಿಯರ ದಂಡೇ ಬಂದಿರುತ್ತೆ ಅಲ್ವೇ...?! ಮನೆಯಲ್ಲಿ ಮಾಡಿ ತಿನ್ನಲಾರದೆ ಹೋಟೆಲ್ ಗಳಲ್ಲಿ ಮೆಲಕು ಹಾಕುತ್ತಿರುವ ಶ್ರೀಮಂತ ಆಂಟೀರು (ನಮ್ಮ ಊರಿನ ಎಮ್ಮೆಗಳಂತೆ...!), ಸಂಜೆ ಆಯಿತೆಂದರೆ ಒಂದೇ ಒಂದು ಚಾಟ್ಸ್ ಅಂಗಡಿಯನ್ನೂ ಬಿಡದಂತೆ ಮೇಯುತ್ತಿರುವ (ಪತಿ, ಮಕ್ಕಳನ್ನೊಡಗೂಡಿ) ಗಜಗಾಮಿನಿಯರು ಹೊತ್ತು ಗೊತ್ತಿಲ್ಲದೇ ಅಕ್ಕ-ಪಕ್ಕದವರೊಡನೆ ಕಟ್ಟೆ ಪುರಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಲನೆಯರು, ತಮ್ಮ ಪತಿಯನ್ನು ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡ ಹಿಡಿಂಬೆಯರು...... ಹೀಗೇ ನಿಮ್ಮ ಯೋಚನಾಲಹರಿ ಹರಿಯುತ್ತಿದೆ ಅಲ್ಲವೇ....!?
ಈ ಹೋಂ ಮೇಕರ್ ಎಂದು ಕರೆಸಿಕೊಂಡು ಮನೆಯಲ್ಲೇ ಇರುವ ಆಂಟಿಯರ ಹಾಡು-ಪಾಡು ಇದಾದರೆ, ಇನ್ನು ವರ್ಕಿಂಗ್ ವುಮನ್ ಎನಿಸಿಕೊಂಡವರದು ಬೇರೆಯದೇ ಥಿಯರಿ. ಬೆಳಿಗ್ಗೆ ಎದ್ದು ಮನೆಯಲ್ಲೂ ಕೆಲಸ ಮುಗಿಸಿ, ಆಫೀಸಿನಲ್ಲಿ ಕುಳಿತು ಅಲ್ಲಿಯೂ ಗೇಯ್ದು, ಸಂಜೆ ಮನೆಗೆ ಬಂದೂ ಕೂಡ 'ನಾನೇಕೆ ಕೆಲಸ ಮಾಡಲಿ.... ನಮಗಾಗೆ ಅಲ್ವೇ ಈ ತಿಂಡಿ-ಪಂಡಿ ಅಂತ ಜನ ಮಾರ್ಕೊಂಡಿರೋದು... ಅವರಿಗೂ ಹೊಟ್ಟೆ ಪಾಡಾಗಬೇಕಲ್ಲವೇ ಪಾಪ... ಬನ್ನಿ ಹೋಗೋಣ ತಿನ್ನೋಕೆ..' ಇದು ಇವರ ಅಂಬೋಣ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ತಿಂಬೋಣ ಖಾಯಿಲೆಯೆಂಬುದು ವಿಶ್ವವ್ಯಾಪಿಯಾಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಯಾವನೋ ಒಬ್ಬ ಒಂದು ಕಡೆ ಸಗಣಿಯನ್ನು (ಗೊತ್ತಿಲ್ಲದಂತೆ!) ಉಪ್ಪು, ಖಾರ ಹಾಕಿ ಕರಿದು ಮಾರಿದರೂ ಸಹ ಅರಿಯದೆ ಚೆನ್ನಾಗಿದೆಯಪ್ಪ ಎಂದು ತಿಂದು ಬಿಡುವಷ್ಟರ ಮಟ್ಟಿಗೆ....!! ತಮಗೆ ಏನೆಂದೇ ತಿಳಿಯದೆ ಹೊಸ ರುಚಿ ಎಂದು ತಿಂದು ಬಂದ ಆಂಟಿ ಸುಮ್ಮನಿರುತ್ತಾಳೆಯೇ..!? ಖಂಡಿತ ಇಲ್ಲಾ.... ತಕ್ಷಣ ಪಕ್ಕದ ಮನೆಯ ಆಂಟಿಗೆ ಫೋನಾಯಿಸಿ "ಏನ್ರೀ ಲಕ್ಷ್ಮೀ ನಿಮ್ಗೆ ಗೊತ್ತೇನ್ರೀ, ನಮ್ ಬೀದಿ ಕೊನೇಲಿ ಒಂದು ಹುಡ್ಗ ಅದೇನೋ ಚಾಟ್ ಅಂಗಡಿ ಹಾಕಿದಾನೆ ಕಣ್ರೀ ಹೊಸ್ದಾಗಿ.... ಎಷ್ಟ್ ಚೆನ್ನಾಗಿ ಕೊಡ್ತಾನೆ ಅಂತೀರಾ...!! ಇವಾಗ ತಾನೇ ನಾನು ನಮ್ಮೆಜಮಾನ್ರು ತಿನ್ಕೋ ಬಂದ್ವಿ....ನೀವು ಟೇಸ್ಟ್ ನೋಡಿ ಒಂದ್ಸಲ... ಅದೆನನೋ ಕರ್ದು ಮಸಾಲೆ ಹಾಕ್ಕೊಡ್ತಾನ್ರೀ... ಎಲ್ಲೂ ತಿಂದೊರೋಲ್ಲ ನೀವು A1 ಕಣ್ರೀ...." ಹೇಗಿದೆ ವರಸೆ...!!! ಇದನ್ನು ಕೇಳಿದ್ದೆ ಪಕ್ಕದ ಆಂಟಿ ಬಿಟ್ಟಾರೆಯೇ... ತಕ್ಷಣವೇ ಗಂಡನಿಗೆ ದುಂಬಾಲು ಹೋಗಿ ಬರೋಣ ನಡೀರ್ರಿ ಎಂದು....! ಕೆಲವೇ ದಿನಗಳಲ್ಲಿ ಆ ಬೀದಿಯ ಮಂದಿಯೆಲ್ಲಾ ಅಲ್ಲಿ ಹಾಜರಿ ಗುಜರಾಯಿಸಲು ಶುರುವಿಟ್ಟುಕೊಂಡೆ ಬಿಡುತ್ತಾರೆ. ಹೀಗೇ ಆ ಹುಡುಗನ special masaala (!) ಬೀದಿಯಲ್ಲೆಲ್ಲಾ famous ಆಗಿಯೇ ಬಿಡುತ್ತೆ......
ಇಷ್ಟೇ ಅಲ್ಲಾರೀ, ಈ ತಿಂಬೋಣವನ್ನು ಬಿಟ್ಟು ಇನ್ನೊಂದು ಖಯಾಲಿ ಇದೆ ಈ ಆಂಟಿಯರಲ್ಲಿ... ಏನೂ ಅಂತೀರಾ? ಅದೇ ನಿಮಗೆಲ್ಲ ತಿಳ್ದಿರೋ beauty parlor ಫೋಬಿಯಾ ಬಗ್ಗೆ ಕಣ್ರೀ ನಾ ಹೇಳೋಕೆ ಹೊರ್ಟಿರೋದು...! ಗಂಡಂದಿರು ಏನೇ ಅನ್ನಲಿ ಈ ಆಂಟಿಯರಿಂದ ತಾನೇ ನಮ್ಮ beauty parlor ನಡೆಸ್ತಿರೋ ಎಷ್ಟೋ ಆಂಟಿಯರ ಮತ್ತು ಹುಡುಗಿಯರ ಜೀವನ ನಡೀತಿರೋದು. ನೀವು ಒಮ್ಮೆ beauty parlor ಗೆ ಹೋಗಿ ನೋಡಬೇಕು. ನಮ್ಮಂತ ಪ್ರಪಂಚ ಕಂಡಿರದ ಹುಡುಗಿಯರಿಗಿಂತ ಹೆಚ್ಚಾಗಿ ಎಲ್ಲವನ್ನೂ ಕಂಡು, ವಯಸ್ಸಾದರೂ ಒಪ್ಪಿಕೊಳ್ಳಲಾರದ ಆಂಟಿಯರ ದಂಡೇ ಅಲ್ಲಿ ಠಳಾಯಿಸಿರುತ್ತದೆ. ಒಬ್ಬೊಬ್ಬರ ವೇಷ ನೋಡಬೇಕು ಅಲ್ಲಿ... ಆಹಾ ಇದೇನಪ್ಪ ಇದು ಅವರ ಗಂಡಂದಿರಿಗೆ ಪ್ರೀತಿ ಎನಿಸಿಬಿಡುತ್ತದೆ....! ನಮಗೆ ಗಟ್ಟಿಯಾಗಿ ನೋಡಲು ನಾಚಿಕೆಯಾಗುತ್ತದೆ ಕೂಡ...!! ಪಾಪ ಆ ಗಂಡನೆಂಬ ಮಂಕುದಿಣ್ಣೆಯಾದರೂ ಏನೂ ಮಾಡುತ್ತೆ ಕಟ್ಟಿಕೊಂಡ ತಪ್ಪಿಗೆ ಇರಲೇ ಬೇಕಲ್ಲ ಜೊತೆಗೆ...!
ಇಂತಹ ತರಹೇವಾರಿಗಳಲ್ಲಿ ಕೆಲಸವಿಲ್ಲದೆಯೇ busy ಯಾಗಿರುವ ನಮ್ಮ ಆಂಟಿಯರು ಅದೆಷ್ಟು ಚೆನ್ನಾಗಿ ಮೈ ಬೆಳೆಸಿಕೊಂಡಿರುತ್ತಾರೆ ಅಂತೀರಾ...?! ಇದಕ್ಕೆ ಉತ್ತರವೆಂಬಂತೆ ಬಹುಪಾಲು ಅಂಕಲ್ ಗಳು ತಮ್ಮ ಹೆಂಡತಿಯ ಗಜಕಟಿಗಳನ್ನು ಎರಡು ಕಣ್ಣುಗಳಲ್ಲಿ ತುಂಬಿಸಿಕೊಳ್ಳಲಾರದೆ ನಾಲ್ಕು ಕಣ್ಣುಗಳ ಮೊರೆ ಹೋಗಿರುವುದು... !!
ಅಂದ ಹಾಗೇ ಇನ್ನೊಂದು ವಿಷ್ಯ ಮರ್ತಿದ್ದೆ. ಏನೂ ಅಂತೀರಾ... ಅದೇ ಕಣ್ರೀ ಈ ಟಿವಿ ಧಾರಾವಾಹಿಗಳಿಗೂ ಆಂಟಿಗಳಿಗೂ ಇರುವ link ಬಗ್ಗೆ.... ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದನ್ನೂ ಬಿಡದೆ ಅಷ್ಟೂ ಧಾರಾವಾಹಿಯ ವೀಕ್ಷಣೆಯಲ್ಲಿ busy ಅಗೊಗಿದ್ದಾರೆ ಪಾಪ ನಮ್ಮ ನಿಮ್ಮೆಲ್ಲರ ಪ್ರೀತಿಯ ಆಂಟೀರು! ಈಗಿನ ಧಾರಾವಾಹಿಗಳೋ ಅದರ ಕಥೆಯೋ..ಬರೀ ಮನೆ ಮುರಿಯುವ ಅಥವಾ ಎರಡೋ ಮೂರೋ ಮದುವೆಯಾಗುವ ಗಂಡಸಿನ ಕಥಾ ಹಂದರವನ್ನು ಬಿಟ್ಟರೆ ಒಳ್ಳೆಯ ಕಥೆಗಳೇ ಅಪರೂಪ... ಅದರೂ ಇಂಥ ದಾರಾವಾಹಿಗಳೆಂದರೆ ನಮ್ಮ ಆಂಟಿಯರಿಗೆ ಅಚ್ಚು - ಮೆಚ್ಚು. ಮನೆಯವರಿಗೆ ಬೇರೆ channel ಹಾಕಲೂ ಕೊಡದೆ ಅಡಿಗೆ ಕೆಲಸವನ್ನೂ ಬದಿಗೊತ್ತಿ, ಇಂಥಹ ಕಥೆಗಳಲ್ಲಿ ತಲ್ಲೀನರಾಗಿ ಟಿವಿಯ ಮುಂದೆ ಅಳುತ್ತಾ ಕುಳಿತರೆಂದರೆ ಮುಗಿಯಿತು... ಅಂದು ಗಂಡ ಮಕ್ಕಳಿಗೆ ಅಳಿದುಳಿದ ಚೂರು ಪಾರು ಊಟವೇ ಗತಿ. ಹೇಗೆ ನೋಡಿದರೂ ultimate sufferers ಅಂದ್ರೆ ನಮ್ಮ uncle ಗಳು ಪಾಪ...!!
ಅಲ್ಲ ಕಣ್ರೀ, ನಂಗೆ ಅರ್ಥ ಆಗದೆ ಇರೋ ಇನ್ನೊಂದು ವಿಷ್ಯ ಅಂದ್ರೆ .... ಈ ಅಂಕಲ್ ಗಳಿಗೆನೋ ಆಂಟಿಗಳು ಅನಿವಾರ್ಯ, ಕಟ್ಟಿಕೊಂಡಿದ್ದಾರಲ್ಲ ಇರಲೇಬೇಕು.... ಆದರೆ ಈ ನಮ್ಮ ಹುಡುಗರಿಗೆ ಅದೇನೋ ಆಂಟಿಗಳ ದಾಹ ಕಣ್ರೀ. ಅದ್ಯಾಕೋ ಆಂಟಿಯರ ಮೋಹ ಸ್ವಲ್ಪ ಜಾಸ್ತಿಯೇ ಇರುತ್ತದಲ್ಲ ಹುಡುಗರಿಗೆ ಅದ್ಯಾಕೆ ಅಂತಾ....!?! ಅದ್ಕೆ ಇರ್ಬೇಕು ನಮ್ಮ ಸಿನಿಮಾ ಕ್ಷೇತ್ರ ಆಂಟಿ ಪ್ರೀತ್ಸೇ, ಆಂಟಿ ತುಂಬಾ ತುಂಟಿ - ಯಂಥ ಸಿನಿಮಾಗಳನ್ನು ತೆಗೆದಿದ್ದು....!!
ನಮ್ಮ ಕರೀನಾ ಕಪೂರ್ ಳಂಥ 'zero size' ಪ್ರಸಿದ್ಧಿಯಾಗುತ್ತಿರುವ ಕಾಲದಲ್ಲೂ ನಮ್ಮ ಹುಡುಗರು ಕನಸಿನಲ್ಲೂ ಆಂಟಿ-ಆಂಟಿ ಎಂದು ಕನವರಿಸುತ್ತಿದ್ದಾರೆಂದರೆ, ಅದು ಹುಡುಗರ 'ಆಂಟಿ ಮೋಹ'ವೋ ಇಲ್ಲಾ ಆಂಟಿಯರಿಗೆ ಇರುವ ದಾಹವೋ....!!!?
ನಮಗೇನ್ ಗೊತ್ತು ಸ್ವಾಮೀ........!!!!
ಕಾವ್ಯಾ ಕಶ್ಯಪ್.....
(ಸೀರಿಯಸ್ ಬರಹಗಳ ಹೊರತಾಗಿ ಬರೆಯುವ ಒಂದು ಸಣ್ಣ ಪ್ರಯತ್ನ... )
(ಸೀರಿಯಸ್ ಬರಹಗಳ ಹೊರತಾಗಿ ಬರೆಯುವ ಒಂದು ಸಣ್ಣ ಪ್ರಯತ್ನ... )





