ಚಂದ್ರನಿರದ ಬಾನು.... ಪಲ್ಲವಿಯಿರದ ಹಾಡು....
ನೀನಿದ್ದರೆ ನಾನು.... ಸೇರುವೆ ಪ್ರೀತಿಯ ಗೂಡು...
ನಿನ್ನ ನೆನಪೇ ಸಾಕು.... ನೋವ ಮರೆಯಲು...
ನೀ ಜೊತೆಗಿದ್ದರೆ... ಅದುವೇ ಪ್ರೀತಿಯ ಹೊನಲು....
ನಿನ್ನ ನಗುವದು.. ಆಕರ್ಷಣೆಯ ಕಡಲು....
ಓಡೋಡಿ ಬರುವೆ... ನಗೆ ಮುತ್ತುಗಳ ಆಯಲು..
ನೋಟ ನೆಟ್ಟಿವೆ ನೀ ಬರುವ ದಾರಿಯತ್ತ ನನ್ನ ಕಂಗಳು…
ಆದರೂ ಆಗುತ್ತಿಲ್ಲ ನಿನ್ನನ್ನರಸಲು…
ಗೆಳೆಯಾ,
ಏನೋ ಸುಖವಿದೆ ನಿನ್ನ ಆಗಮನಕ್ಕಾಗಿ ಕಾಯಲು…
ಬಂದೆ ಬರುವೆಯೆಂಬ ನನ್ನ ನಂಬಿಕೆಯನ್ನು ಹುಸಿಯಾಗಿಸದೆ,
ಬಂದುಬಿಡು ನನ್ನ ಬಾಳ ಹಸನಾಗಿಸಲು…
(ಚಿತ್ರ ಕೃಪೆ ಅರುಣ್ ಭಟ್)
(ನಾನೊಂದು ಸಾಲು ನನ್ನ friend ಒಂದು ಸಾಲಿನಂತೆ ಬರೆದ ಕವನ
ಬೇರೆ ಬೇರೆ ಭಾವಗಳನ್ನು ಕೂಡಿಸಿಟ್ಟ ಸಾಲುಗಳು... )
ಕಾವ್ಯಾ :)