(ಭಾಗ 2)
ಮೊನ್ನೆ ಅತ್ತಿಗೆ ಮೇಘಾ ಜೊತೆ ಒಂದು ಪಾವತಿಸಿ ಉಳಿಯುವ ಮನೆ (paying guest home) ಗೆ ಹೋಗಿದ್ದೆ, ಒಬ್ಬ ಸ್ನೇಹಿತೆಯನ್ನು ಭೇಟಿ ಮಾಡಲು. ಅಲ್ಲಿರುವ ಹುಡುಗಿಯರು ಕೆಲವರನ್ನು ನೋಡಿ ದಂಗಾಗಿ ಹೋದೆವು ನಾವಿಬ್ಬರು.... ಯಾವುದೇ ಅಂಕೆ ಶಂಕೆಯಿಲ್ಲದೆ ಬೀದಿ ಬಸವಿಯರಂತೆ ಇದ್ದಾರೆ....!! ನಮ್ಮ ಕಡೆ ಹೇಳುತ್ತಾರಲ್ಲ 'ಸುಳಿದು ಬಿಟ್ಟ ಬಸವನ ಹಾಗೆ' ಎಂದು.... ಅವರು 'ಎಲ್ಲರೊ'ಡನೆಯೂ friendly ಯಂತೆ...! ನಮ್ಮೊಡನೆಯೂ ಚೆನ್ನಾಗಿ ಮಾತಾಡಿದರು. ಅವರಲ್ಲಿ ಇಬ್ಬರು ತುಂಬಾ modern ಹುಡುಗಿಯರು, ಅವರು ನಮಗೆ ಸ್ವಲ್ಪ ಪರಿಚಯವಿದ್ದಿದ್ದರಿಂದ ನಮ್ಮ ಜೊತೆಯೇ ಮಾತನಾಡುತ್ತ ಕುಳಿತರು. ಎಷ್ಟೆಂದರೂ friendly nature ಅಲ್ಲವೇ ಅವರದ್ದು.... ಅಂದಿನ ಸಂಭಾಷಣೆಯ ಒಂದು ತುಣುಕನ್ನು ಮಾತ್ರ ಹೇಳುತ್ತೇನೆ:
ಅವಳು: ಎಲ್ಲಿದ್ದೀಯ ಮೇಘಾ ನೀನು...? hostel .....?
ಮೇಘಾ: ಅಲ್ಲಪ್ಪ ಸಧ್ಯ 'm lucky.... ನಾನು ಅಪ್ಪ-ಅಮ್ಮನ ಜೊತೆ ಆರಾಮಾಗಿ ಮನೆಯಲ್ಲೇ ಇರೋದು....
ಅವಳು: ಓಹ್...ಹೌದಾ... ಅದ್ಹೇಗೆ ಇರ್ತೀರಾ family ಜೊತೆ, ಅಪ್ಪ-ಅಮ್ಮನ ಜೊತೆ...!! ಕಷ್ಟಾಪ್ಪ... so many restrictions......!!
ಮೇಘಾ: ಹೌದಾ....?!!! ನನಗೇನು ಹಾಗನ್ಸಲ್ಲಪ್ಪ... ಖುಷಿ ಆಗುತ್ತೆ....
ಅವರಿಬ್ಬರಲ್ಲಿ ಒಬ್ಬಳು: (ಇನ್ನೊಬ್ಬಳಿಗೆ) ಹೇಗಿರ್ತಾರೋ ಅಲ್ವೇನೆ ... ಅಲ್ಲಿ ಹೋಗ್ಬೇಡ..ಇಲ್ಲಿ ಬರ್ಬೇಡ...ಹೀಗಿರು...ಹಾಗಿರು... ಅಯ್ಯಪ್ಪಾ... ಬರೀ ಇದೇ ಗೋಳು ಅಪ್ಪ ಅಮ್ಮನದು....
ಇನ್ನೊಬ್ಬಳು: ಹುಂ ಕಣೆ..ಅಪ್ಪ ಅಮ್ಮನ ಜೊತೆ ಮನೇಲಿದ್ರೆ ಅದೊಂಥರ Jail ಅಲ್ಲಿ ಇದ್ದಂಗೆ ಇರತ್ತೆ... ಇಲ್ಲಿ ನಾವು ಎಷ್ಟು ಆರಾsssssಮಾಗಿ ಇದೀವಪ್ಪ... freeeee birds.... ಹೇಳೋರಿಲ್ಲ ಕೇಳೋರಿಲ್ಲ....!!
ಉಫ್... ಎಂದು ನಿಟ್ಟುಸಿರು ಬಿಡುತ್ತ ಅಲ್ಲಿಂದ ಹೊರ ಬಂದೆವು ನಾನು ಮೇಘಾ....! "ಅದೇನು ಹುಡ್ಗೀರಪ್ಪ ಇವ್ರೆಲ್ಲಾ...." ಇಬ್ಬರಿಂದಲೂ ಒಂದೇ ಸಮನೆ ಉದ್ಘಾರ...!! ಹೆತ್ತ ಅಮ್ಮ-ಅಪ್ಪನೊಡನೆ ಇರುವುದಕ್ಕೇ ಇವರಿಗೆ ಕಷ್ಟವಾದರೆ ಇನ್ನು ಯಾರೊಡನೆ ಇವರೆಲ್ಲ ಬದುಕಿ ಬಾಳಿಯಾರು....?! ಇಷ್ಟು ವರ್ಷ ತಮ್ಮ ಸುಖವನ್ನು ಬದಿಗಿಟ್ಟು ನಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿಯೇ ಬೇಡವೆಂದಾದಲ್ಲಿ ಇವರೆಲ್ಲಾ ಮದುವೆಯಾಗಿ ಅತ್ತೆ-ಮಾವನೊಡನೆ ಬಾಳಿಯಾರೆ... ಇಂಥವರೇ ಅತ್ತೆ-ಮಾವ, ಮೈದುನ -ನಾದಿನಿ ಯಾರ ತಂಟೆಯೂ ಇಲ್ಲದ ಮನೆ ಹುಡುಗ ಬೇಕು ಹೇಳುವುದು ಎಂಬುದರ ಅರಿವು ನಮಗೆ ಅವೊತ್ತು ಆಯಿತು.
ಮೊದಲಿನ ಕಾಲದ ಹೆಣ್ಣಿಗೂ, ಈಗಿನ ಕಾಲದ ಹೆಣ್ಣಿಗೂ ಇಷ್ಟೊಂದು ಅಜಗಜಾಂತರ ಹೇಗೆ ಬಂತು....? ಈ ಪರಿವರ್ತನೆಗೆ ಕಾರಣವೇನು...? ಮನೆಯಲ್ಲಿ ಅವರನ್ನು ಬೆಳೆಸುವ ಸಂಸ್ಕಾರವೇ...? ಅಥವಾ ಈಗಿನ modernization ಎನ್ನುವುದರ ಪರಿಣಾಮವೇ...? ಇಲ್ಲಾ generation gap ಎನ್ನುವ ವಾದವೇ...?
ಕಾರಣ ಏನೇ ಇದ್ದರೂ ಮೊದಲಿನ ಕೂಡು ಕುಟುಂಬದಲ್ಲಿದ್ದ ಸಂತಸ, ಹಬ್ಬ-ಹರಿದಿನಗಳಲ್ಲಿ ಎಲ್ಲರ ಜೊತೆ ಪೂಜೆ, ಸಿಹಿ ಮಾಡಿ ತಿನ್ನುತ್ತಿದ್ದ ಸಂಭ್ರಮ, ಹೊಸ ಬಟ್ಟೆ ಹಾಕಿದಾಗ ಮಕ್ಕಳ ಮುಖದಲ್ಲಿನ ಖುಷಿ ಇವೆಲ್ಲ ಈ modernization ನಲ್ಲಿ ನಿಜವಾಗಿಯೂ ಕಣ್ಮರೆಯಾಗುತ್ತಿದೆ.ಯಾಂತ್ರಿಕ ಬದುಕಿಗೆ ನಾವೆಲ್ಲಾ ಎಷ್ಟೊಂದು ಒಗ್ಗಿ ಹೋಗುತ್ತಿದ್ದೇವೆ ಎಂದು ನೆನೆಸಿಕೊಂಡರೆ ಬೇಜಾರಾಗುತ್ತದೆ. ಹಳೆ ಖುಷಿ-ಸಂಭ್ರಮವನ್ನು ನೆನೆಸಿಕೊಂಡರೆ ಈಗಿನ ಪರಿಸ್ಥಿತಿಗೆ ಪಿಚ್ಚೆನಿಸುತ್ತದೆ...
ಆಗಿನ ಮದುವೆಗಳು ಯಾರೋ ಗೊತ್ತಿಲ್ಲದವನ ಜೊತೆ ನಡೆದರೂ ಸಂಸಾರದಲ್ಲಿ ಹೊಂದಾಣಿಕೆಯಿರುತ್ತಿತ್ತು... ಮನಸ್ತಾಪಗಳು ನಾಲ್ಕು ಗೋಡೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ಆಗಿನ ಸ್ಥಿತಿಯಲ್ಲಿ ಹೆಂಗಸರೇ ಪೂರ್ತಿಯಾಗಿ ಹೊಂದಿಕೊಂಡು ಬಿಡುತ್ತಿದ್ದರು. ಈಗಲೂ ಅದೇ ನಿರಿಕ್ಷೆಯಿಂದಲೇ ಹಲವಾರು ಸಂಬಂಧಗಳು ನಾಶವಾಗುತ್ತಿವೆ. ಸ್ತ್ರೀಯರು ಈಗ ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ಹೊರಗಿನ ಪ್ರಪಂಚದ ಜೊತೆ ಸ್ಪರ್ಧಿಸುವಂತಾಗಿದ್ದಾರೆ. ಆದ್ದರಿಂದ ಈಗಿನ ಜೀವನದಲ್ಲಿ ಗಂಡು-ಹೆಣ್ಣು ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳುವುದು ಬಹು ಮುಖ್ಯ. ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರನ್ನೆಲ್ಲ ನೋಯಿಸಿ ವೇಗದಲ್ಲಿ ಮದುವೆಯಾದವರು ಅದೇ ವೇಗದಲ್ಲಿ ಬೇರೆ-ಬೇರೆಯಾಗುತ್ತಿರುವುದು ದುಃಖಕರ ಸಂಗತಿ. ಮದುವೆಗೆ ಮೊದಲು ಇದ್ದ ಪ್ರೀತಿ-ಪ್ರೇಮ ಅದೆಷ್ಟು ಬೇಗ ಅದೆಲ್ಲಿ ಮಾಯವಾಗುತ್ತದೋ.. ಎಲ್ಲವೂ ಎಂದಲ್ಲ, ಆದರೆ ಬಹುತೇಕ ಪ್ರೇಮ ವಿವಾಹಗಳು ಕುಸಿದು ಬೀಳುತ್ತಿವೆ. ಪ್ರೀತಿಸುವಾಗ ಹುಡುಗನಾದವನು ಯಾವಾಗಲೂ ತನ್ನ ಹುಡುಗಿಯನ್ನು ಒಲಿಸಿಕೊಳ್ಳಬೇಕು ಎನ್ನುವುದರಲ್ಲಿ ಅವಳಿಗಿಷ್ಟವಾದ ಕೆಲಸಗಳನ್ನೇ ಮಾಡುತ್ತಾನೆ ಮತ್ತು ಪ್ರೀತಿಯ ಗಾಢತೆ ಹೆಚ್ಚಿರುತ್ತದೆ. ಮದುವೆಯಾದ ಮೇಲೇ ಹೇಗಿದ್ದರೂ ಹೆಂಡತಿಯಲ್ಲವೇ ಜೊತೆಗಿದ್ದೆ ಇರುತ್ತಾಳೆ ಎನ್ನುವ ಭಾವನೆಯಿಂದ ಹಕ್ಕು-ಅಧಿಕಾರಗಳ ಸ್ವರ ಜೊತೆಯಾಗಿಬಿಡುತ್ತದೆ. ಹುಡುಗಿಯಾದವಳು ಮೊದಲು ಕಂಡಿದ್ದ ಪ್ರೇಮವನ್ನು ಹೆಂಡತಿಯಾಗಿ ಪಡೆಯಲು ಆಗದಾದಾಗ ಅವಳಲ್ಲಿನ ಪ್ರೀತಿ ಕೂಡ ಕಡಿಮೆಯಾಗಿ ಹೊಂದಾಣಿಕೆಯ ಮನೋಭಾವ ಕುಗ್ಗಲಾರಂಭಿಸುತ್ತದೆ. ಇಂತಹ ಸಂದರ್ಭಗಳು ಜಾಸ್ತಿಯಾದಾಗ ಸದ್ದಿಲ್ಲದೇ ದಾಂಪತ್ಯದ ಕೊಂಡಿ ಕಳಚಿಕೊಳ್ಳಲಾರಂಭಿಸುತ್ತದೆ.....
ಪ್ರೀತಿಸುವಾಗ ಒಲಿಸಿಕೊಳ್ಳಬೇಕೆಂಬ ಪ್ರಯತ್ನಗಳನ್ನು ಬಿಟ್ಟು ತಾನಿರುವುದೇ ಹೀಗೆ ಎಂಬಂತೆ ನೈಜ ರೂಪದಲ್ಲೇ ಅಂತರಾಳದಿಂದ ಪ್ರೀತಿಸಿದರೆ ಮಾತ್ರ ಅಂತಹ ಪ್ರೀತಿ ಶಾಶ್ವತವಾಗಿರುತ್ತದೆ. ಹೀಗಿದ್ದಾಗ ಪ್ರೇಯಸಿಗೆ ತನ್ನ ಹುಡುಗ ಹೇಗೆ ಎಂಬುದರ ಸಂಪೂರ್ಣ ಅರಿವಿರುವುದರಿಂದ ನಂತರವೂ ಅದೇ ಸ್ವಭಾವ ಅವನಲ್ಲಿ ಕಾಣುವುದರಿಂದ ಪ್ರೀತಿ ಎಂಬುದು ಸಿಹಿ ನೀರಿನ ಒರತೆಯಂತೆ ಸದಾ ಬಾಳಿನಲ್ಲಿ ಹರಿಯುತ್ತಿರುತ್ತದೆ. ಬದಲಿಗೆ 'ಅವಳಿಗಾಗಿ' ನೈಜ ಸ್ವಭಾವದ ಮೇಲೇ ಪೊರೆ ಬೆಳೆಸಿಕೊಂಡರೆ ಮದುವೆ ನಂತರ ಪೊರೆ ಕಳಚಿದಾಗ, 'ನನ್ನವನು ಮೊದಲು ಹೀಗಿರಲಿಲ್ಲ ಈಗ ಹೀಗೆಕಾದ' ಎಂದು ಹೆಂಡತಿಯಾದವಳಿಗೆ ಕಾಡಲಾರಂಭಿಸಿದರೆ, ತಿಳಿಯಾದ ನೀರಿಗೆ ಕಲ್ಲೆಸೆದಂತೆ ಪ್ರೀತಿಯ ಸಂಸಾರದಲ್ಲಿ ತರಂಗಗಳು ಏಳಲಾರಂಭಿಸುತ್ತದೆ. ಅವನು ಬದಲಾದವನು ಅವನೇ ಹೊಂದಿಕೊಳ್ಳಲಿ ಎಂದು ಇವಳು, ಅವಳು ನನ್ನ ಹೆಂಡತಿ ಅವಳೇ ಹೊಂದಿಕೊಳ್ಳಬೇಕು ಎಂದು ಇವನು... ತಾನೇಕೆ ಹೊಂದಿಕೊಳ್ಳಬೇಕೆಂಬ ಭಾವನೆ ಇಬ್ಬರಲ್ಲೂ ಬಂತೆಂದರೆ ಸಂಸಾರವನ್ನು ಹಿಡಿದು ನಿಲ್ಲಿಸುವುದು ದುಃಸ್ತರ.
ಒಟ್ಟಿನಲ್ಲಿ ಸಂಬಂಧಗಳನ್ನು ಮೊದಲಿನವರಂತೆ ನಿಭಾಯಿಸಲು ನಮ್ಮಿಂದಾಗುತ್ತಿಲ್ಲ ಎಂಬುದಂತೂ ಕಟು ಸತ್ಯ... ಇದಕ್ಕೆ ಏಕ ವ್ಯಕ್ತಿ ಪರಿಹಾರವನ್ನು ಅವರವರೇ ಕಂಡುಕೊಳ್ಳಬಹುದೇ ವಿನಃ ಸಾಮಾಜಿಕವಾಗಿ ಏನೋ ಸಲಹೆ ನೀಡಲಾಗುವುದಿಲ್ಲ.........!!
ಕಾವ್ಯಾ.....


ಇವೆಲ್ಲ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ .... :(
ReplyDeleteಪ್ರೋತ್ಸಾಹಕ್ಕೆ ಧನ್ಯವಾದಗಳು... :)
ReplyDeleteನಿಜ.. ಮನುಷ್ಯ ಯಾವುದರಿಂದಲೇ ಆಗಲಿ ಒಳ್ಳೆಯ ಅಂಶವನ್ನು ಮಾತ್ರ ತೆಗೆದುಕೊಳ್ಳಬೇಕು.. ಇಲ್ಲವಾದಲ್ಲಿ ಹೀಗೆ ಆಗುವುದು.. ತಂತ್ರಜ್ಞಾನ ಕ್ಷೇತ್ರ ಇಷ್ಟು ಬೆಳೆಯುತ್ತಿರುವಾಗ ಅದನ್ನು ಉಪಯೋಗ ಪಡಿಸಿಕೊಳ್ಳುವುದಕ್ಕಿಂತ ದುರುಪಯೋಗ ಪಡಿಸಿಕೊಳ್ಳುವುದೇ ಜಾಸ್ತಿಯಾಗಿಲ್ಲವೇ...! ಪ್ರತಿಯೊಬ್ಬರೂ ಜಾಗ್ರತಗೊಳ್ಳ ಬೇಕಷ್ಟೇ... :(
houdu choloo bardde
ReplyDeletegood one....
ReplyDeleteVishleshane chennagide. Hondanike annodu obbarinda agadu. Ibbaru artha madikobeku. vaituktikavagi bage hariasalasadhy. Samajanu hokku nodabeku. Adara patravu ide.
ReplyDeleteottinalli helabekandre ajja hakida aalada mara antha nenu hakolludu sariye. yene western agiraly, gouravada life madabeku aste. mane horage band jeevana yedurisa beku.Freedom anno padada artha aagbeku durupayoga agabaradu.
Any way nimma lekhanagau nannannu nimm "Fan" madive.
tumba dhanyavaadagalu Ananth Sir....
ReplyDeleteeradu kai seridare maatra chappale sadhya ondu kaiyalli kevala chitike matra sadhya... pratiyobbaroo tamma moulya, javaabdariyannu aritare samasye illavadeetu...