Wednesday, February 9, 2011

ಆಂಟಿ ಎನ್ನುವ ತುಂಟಿಯ ಬಗ್ಗೆ..........


        ಈ  ಆಂಟಿ ಅನ್ನೋ ಪದ ಕೇಳಿದ್ರೆ ಏನೋ ಮುಜುಗರ ಕಣ್ರೀ... ಈ ನಮ್ ಬೆಂಗಳೂರಲ್ಲಿ ಯಾರ್ ನೋಡಿದ್ರೂ ಆಂಟಿ ಅಂತಾನೆ ಸಂಭೋದನೆ ಮಾಡ್ತಾರಲ್ಲಾ, ಇವ್ರಿಗೇನ್ ಅಷ್ಟೂ ಗೊತಾಗಲ್ವೇನ್ರೀ ನಾವಿನ್ನು ಹುಡ್ಗೀರು ಅಂತ...!! ನಮ್ಕಿಂತ ಎಷ್ಟೋ ದೊಡ್ಡ ಮಂದಿ ನಮ್ಮನ್ನ ಆಂಟಿ ಅಂತ ಕರೆದ್ರೆ ನಮ್ಮ ಪರಿಸ್ಥಿತಿ ಹೇಗಾಗಿರಬೇಡ....! 
        ಬಿಡಿ ಈಗ ವಿಷಯಕ್ಕೆ ಬರೋಣ... ಈ ದೊಡ್ಡ ಸಿಟಿಗಳಲ್ಲಿ ಆಂಟಿಯರಂಥ ಆಂಟಿಯರು ಹೇಗಿರ್ತಾರೆ...? ಕೇಳ್ತಿದ್ದ ಹಾಗೇ ನಿಮ್ಗೆ ಕಣ್ಣ್ಮುಂದೆ ಒಂದು ಆಂಟಿಯರ ದಂಡೇ ಬಂದಿರುತ್ತೆ ಅಲ್ವೇ...?! ಮನೆಯಲ್ಲಿ ಮಾಡಿ ತಿನ್ನಲಾರದೆ ಹೋಟೆಲ್ ಗಳಲ್ಲಿ ಮೆಲಕು ಹಾಕುತ್ತಿರುವ ಶ್ರೀಮಂತ ಆಂಟೀರು (ನಮ್ಮ ಊರಿನ ಎಮ್ಮೆಗಳಂತೆ...!), ಸಂಜೆ ಆಯಿತೆಂದರೆ ಒಂದೇ ಒಂದು ಚಾಟ್ಸ್ ಅಂಗಡಿಯನ್ನೂ ಬಿಡದಂತೆ ಮೇಯುತ್ತಿರುವ (ಪತಿ, ಮಕ್ಕಳನ್ನೊಡಗೂಡಿ) ಗಜಗಾಮಿನಿಯರು ಹೊತ್ತು ಗೊತ್ತಿಲ್ಲದೇ ಅಕ್ಕ-ಪಕ್ಕದವರೊಡನೆ ಕಟ್ಟೆ ಪುರಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಲನೆಯರು, ತಮ್ಮ ಪತಿಯನ್ನು ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡ ಹಿಡಿಂಬೆಯರು...... ಹೀಗೇ ನಿಮ್ಮ ಯೋಚನಾಲಹರಿ ಹರಿಯುತ್ತಿದೆ ಅಲ್ಲವೇ....!?
        ಈ ಹೋಂ ಮೇಕರ್ ಎಂದು ಕರೆಸಿಕೊಂಡು ಮನೆಯಲ್ಲೇ ಇರುವ ಆಂಟಿಯರ ಹಾಡು-ಪಾಡು ಇದಾದರೆ, ಇನ್ನು ವರ್ಕಿಂಗ್ ವುಮನ್ ಎನಿಸಿಕೊಂಡವರದು ಬೇರೆಯದೇ ಥಿಯರಿ. ಬೆಳಿಗ್ಗೆ ಎದ್ದು ಮನೆಯಲ್ಲೂ ಕೆಲಸ ಮುಗಿಸಿ, ಆಫೀಸಿನಲ್ಲಿ ಕುಳಿತು ಅಲ್ಲಿಯೂ ಗೇಯ್ದು, ಸಂಜೆ ಮನೆಗೆ ಬಂದೂ ಕೂಡ 'ನಾನೇಕೆ ಕೆಲಸ ಮಾಡಲಿ.... ನಮಗಾಗೆ ಅಲ್ವೇ ಈ ತಿಂಡಿ-ಪಂಡಿ ಅಂತ ಜನ ಮಾರ್ಕೊಂಡಿರೋದು... ಅವರಿಗೂ ಹೊಟ್ಟೆ ಪಾಡಾಗಬೇಕಲ್ಲವೇ ಪಾಪ... ಬನ್ನಿ ಹೋಗೋಣ ತಿನ್ನೋಕೆ..' ಇದು ಇವರ ಅಂಬೋಣ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ತಿಂಬೋಣ ಖಾಯಿಲೆಯೆಂಬುದು ವಿಶ್ವವ್ಯಾಪಿಯಾಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಯಾವನೋ ಒಬ್ಬ ಒಂದು ಕಡೆ ಸಗಣಿಯನ್ನು (ಗೊತ್ತಿಲ್ಲದಂತೆ!) ಉಪ್ಪು, ಖಾರ ಹಾಕಿ ಕರಿದು ಮಾರಿದರೂ ಸಹ ಅರಿಯದೆ ಚೆನ್ನಾಗಿದೆಯಪ್ಪ ಎಂದು ತಿಂದು ಬಿಡುವಷ್ಟರ ಮಟ್ಟಿಗೆ....!! ತಮಗೆ ಏನೆಂದೇ ತಿಳಿಯದೆ ಹೊಸ ರುಚಿ ಎಂದು ತಿಂದು ಬಂದ ಆಂಟಿ ಸುಮ್ಮನಿರುತ್ತಾಳೆಯೇ..!? ಖಂಡಿತ ಇಲ್ಲಾ.... ತಕ್ಷಣ ಪಕ್ಕದ ಮನೆಯ ಆಂಟಿಗೆ ಫೋನಾಯಿಸಿ "ಏನ್ರೀ ಲಕ್ಷ್ಮೀ ನಿಮ್ಗೆ ಗೊತ್ತೇನ್ರೀ, ನಮ್ ಬೀದಿ ಕೊನೇಲಿ ಒಂದು ಹುಡ್ಗ ಅದೇನೋ ಚಾಟ್ ಅಂಗಡಿ ಹಾಕಿದಾನೆ ಕಣ್ರೀ ಹೊಸ್ದಾಗಿ.... ಎಷ್ಟ್ ಚೆನ್ನಾಗಿ ಕೊಡ್ತಾನೆ ಅಂತೀರಾ...!! ಇವಾಗ ತಾನೇ ನಾನು ನಮ್ಮೆಜಮಾನ್ರು ತಿನ್ಕೋ ಬಂದ್ವಿ....ನೀವು ಟೇಸ್ಟ್ ನೋಡಿ ಒಂದ್ಸಲ... ಅದೆನನೋ ಕರ್ದು ಮಸಾಲೆ ಹಾಕ್ಕೊಡ್ತಾನ್ರೀ... ಎಲ್ಲೂ ತಿಂದೊರೋಲ್ಲ ನೀವು A1 ಕಣ್ರೀ...." ಹೇಗಿದೆ ವರಸೆ...!!! ಇದನ್ನು ಕೇಳಿದ್ದೆ ಪಕ್ಕದ ಆಂಟಿ ಬಿಟ್ಟಾರೆಯೇ... ತಕ್ಷಣವೇ ಗಂಡನಿಗೆ ದುಂಬಾಲು ಹೋಗಿ ಬರೋಣ ನಡೀರ್ರಿ ಎಂದು....! ಕೆಲವೇ ದಿನಗಳಲ್ಲಿ ಆ ಬೀದಿಯ ಮಂದಿಯೆಲ್ಲಾ ಅಲ್ಲಿ ಹಾಜರಿ ಗುಜರಾಯಿಸಲು ಶುರುವಿಟ್ಟುಕೊಂಡೆ ಬಿಡುತ್ತಾರೆ. ಹೀಗೇ ಆ ಹುಡುಗನ special masaala (!) ಬೀದಿಯಲ್ಲೆಲ್ಲಾ famous ಆಗಿಯೇ ಬಿಡುತ್ತೆ......

       ಇಷ್ಟೇ ಅಲ್ಲಾರೀ, ಈ ತಿಂಬೋಣವನ್ನು ಬಿಟ್ಟು ಇನ್ನೊಂದು ಖಯಾಲಿ ಇದೆ ಈ ಆಂಟಿಯರಲ್ಲಿ... ಏನೂ ಅಂತೀರಾ? ಅದೇ ನಿಮಗೆಲ್ಲ ತಿಳ್ದಿರೋ beauty parlor ಫೋಬಿಯಾ ಬಗ್ಗೆ ಕಣ್ರೀ ನಾ  ಹೇಳೋಕೆ ಹೊರ್ಟಿರೋದು...! ಗಂಡಂದಿರು ಏನೇ ಅನ್ನಲಿ ಈ ಆಂಟಿಯರಿಂದ ತಾನೇ ನಮ್ಮ beauty parlor ನಡೆಸ್ತಿರೋ ಎಷ್ಟೋ ಆಂಟಿಯರ ಮತ್ತು ಹುಡುಗಿಯರ ಜೀವನ ನಡೀತಿರೋದು. ನೀವು ಒಮ್ಮೆ beauty parlor ಗೆ ಹೋಗಿ ನೋಡಬೇಕು. ನಮ್ಮಂತ ಪ್ರಪಂಚ ಕಂಡಿರದ ಹುಡುಗಿಯರಿಗಿಂತ ಹೆಚ್ಚಾಗಿ ಎಲ್ಲವನ್ನೂ ಕಂಡು, ವಯಸ್ಸಾದರೂ ಒಪ್ಪಿಕೊಳ್ಳಲಾರದ ಆಂಟಿಯರ ದಂಡೇ ಅಲ್ಲಿ ಠಳಾಯಿಸಿರುತ್ತದೆ. ಒಬ್ಬೊಬ್ಬರ ವೇಷ ನೋಡಬೇಕು ಅಲ್ಲಿ... ಆಹಾ ಇದೇನಪ್ಪ ಇದು ಅವರ ಗಂಡಂದಿರಿಗೆ ಪ್ರೀತಿ ಎನಿಸಿಬಿಡುತ್ತದೆ....! ನಮಗೆ ಗಟ್ಟಿಯಾಗಿ ನೋಡಲು ನಾಚಿಕೆಯಾಗುತ್ತದೆ ಕೂಡ...!! ಪಾಪ ಆ ಗಂಡನೆಂಬ ಮಂಕುದಿಣ್ಣೆಯಾದರೂ ಏನೂ ಮಾಡುತ್ತೆ ಕಟ್ಟಿಕೊಂಡ ತಪ್ಪಿಗೆ ಇರಲೇ ಬೇಕಲ್ಲ ಜೊತೆಗೆ...! 
         ಇಂತಹ ತರಹೇವಾರಿಗಳಲ್ಲಿ ಕೆಲಸವಿಲ್ಲದೆಯೇ busy ಯಾಗಿರುವ ನಮ್ಮ ಆಂಟಿಯರು ಅದೆಷ್ಟು ಚೆನ್ನಾಗಿ ಮೈ ಬೆಳೆಸಿಕೊಂಡಿರುತ್ತಾರೆ ಅಂತೀರಾ...?! ಇದಕ್ಕೆ ಉತ್ತರವೆಂಬಂತೆ ಬಹುಪಾಲು ಅಂಕಲ್ ಗಳು ತಮ್ಮ ಹೆಂಡತಿಯ ಗಜಕಟಿಗಳನ್ನು ಎರಡು ಕಣ್ಣುಗಳಲ್ಲಿ ತುಂಬಿಸಿಕೊಳ್ಳಲಾರದೆ ನಾಲ್ಕು ಕಣ್ಣುಗಳ ಮೊರೆ ಹೋಗಿರುವುದು... !!
        ಅಂದ ಹಾಗೇ ಇನ್ನೊಂದು ವಿಷ್ಯ ಮರ್ತಿದ್ದೆ. ಏನೂ ಅಂತೀರಾ... ಅದೇ ಕಣ್ರೀ ಈ ಟಿವಿ ಧಾರಾವಾಹಿಗಳಿಗೂ ಆಂಟಿಗಳಿಗೂ  ಇರುವ  link ಬಗ್ಗೆ.... ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದನ್ನೂ ಬಿಡದೆ ಅಷ್ಟೂ ಧಾರಾವಾಹಿಯ ವೀಕ್ಷಣೆಯಲ್ಲಿ busy ಅಗೊಗಿದ್ದಾರೆ ಪಾಪ ನಮ್ಮ ನಿಮ್ಮೆಲ್ಲರ ಪ್ರೀತಿಯ ಆಂಟೀರು! ಈಗಿನ ಧಾರಾವಾಹಿಗಳೋ  ಅದರ ಕಥೆಯೋ..ಬರೀ ಮನೆ ಮುರಿಯುವ ಅಥವಾ ಎರಡೋ ಮೂರೋ  ಮದುವೆಯಾಗುವ ಗಂಡಸಿನ ಕಥಾ ಹಂದರವನ್ನು ಬಿಟ್ಟರೆ ಒಳ್ಳೆಯ ಕಥೆಗಳೇ ಅಪರೂಪ... ಅದರೂ ಇಂಥ ದಾರಾವಾಹಿಗಳೆಂದರೆ ನಮ್ಮ ಆಂಟಿಯರಿಗೆ ಅಚ್ಚು - ಮೆಚ್ಚು. ಮನೆಯವರಿಗೆ ಬೇರೆ channel ಹಾಕಲೂ ಕೊಡದೆ ಅಡಿಗೆ ಕೆಲಸವನ್ನೂ ಬದಿಗೊತ್ತಿ, ಇಂಥಹ ಕಥೆಗಳಲ್ಲಿ ತಲ್ಲೀನರಾಗಿ ಟಿವಿಯ ಮುಂದೆ ಅಳುತ್ತಾ ಕುಳಿತರೆಂದರೆ ಮುಗಿಯಿತು... ಅಂದು ಗಂಡ ಮಕ್ಕಳಿಗೆ ಅಳಿದುಳಿದ ಚೂರು ಪಾರು ಊಟವೇ ಗತಿ. ಹೇಗೆ ನೋಡಿದರೂ ultimate sufferers ಅಂದ್ರೆ ನಮ್ಮ uncle ಗಳು ಪಾಪ...!!
        ಅಲ್ಲ ಕಣ್ರೀ, ನಂಗೆ ಅರ್ಥ ಆಗದೆ ಇರೋ ಇನ್ನೊಂದು ವಿಷ್ಯ ಅಂದ್ರೆ .... ಈ ಅಂಕಲ್ ಗಳಿಗೆನೋ ಆಂಟಿಗಳು ಅನಿವಾರ್ಯ, ಕಟ್ಟಿಕೊಂಡಿದ್ದಾರಲ್ಲ ಇರಲೇಬೇಕು.... ಆದರೆ ಈ ನಮ್ಮ ಹುಡುಗರಿಗೆ ಅದೇನೋ ಆಂಟಿಗಳ ದಾಹ ಕಣ್ರೀ. ಅದ್ಯಾಕೋ ಆಂಟಿಯರ ಮೋಹ ಸ್ವಲ್ಪ ಜಾಸ್ತಿಯೇ ಇರುತ್ತದಲ್ಲ ಹುಡುಗರಿಗೆ ಅದ್ಯಾಕೆ ಅಂತಾ....!?! ಅದ್ಕೆ ಇರ್ಬೇಕು ನಮ್ಮ ಸಿನಿಮಾ ಕ್ಷೇತ್ರ ಆಂಟಿ ಪ್ರೀತ್ಸೇ, ಆಂಟಿ ತುಂಬಾ ತುಂಟಿ - ಯಂಥ ಸಿನಿಮಾಗಳನ್ನು ತೆಗೆದಿದ್ದು....!!

    ನಮ್ಮ ಕರೀನಾ ಕಪೂರ್ ಳಂಥ 'zero size' ಪ್ರಸಿದ್ಧಿಯಾಗುತ್ತಿರುವ ಕಾಲದಲ್ಲೂ ನಮ್ಮ ಹುಡುಗರು ಕನಸಿನಲ್ಲೂ ಆಂಟಿ-ಆಂಟಿ ಎಂದು ಕನವರಿಸುತ್ತಿದ್ದಾರೆಂದರೆ, ಅದು ಹುಡುಗರ 'ಆಂಟಿ ಮೋಹ'ವೋ ಇಲ್ಲಾ ಆಂಟಿಯರಿಗೆ ಇರುವ ದಾಹವೋ....!!!? 
          ನಮಗೇನ್ ಗೊತ್ತು ಸ್ವಾಮೀ........!!!!



ಕಾವ್ಯಾ ಕಶ್ಯಪ್.....
(ಸೀರಿಯಸ್ ಬರಹಗಳ ಹೊರತಾಗಿ ಬರೆಯುವ ಒಂದು ಸಣ್ಣ ಪ್ರಯತ್ನ... ) 

17 comments:

  1. ಎಲ್ಲ ಓಕೆ ಆದ್ರೆ ಕಡೇಲಿ ಹುಡುಗರ ತಂಟೆಗೆ ಬಂದ್ರಲ ಯಾಕೆ ....?

    ReplyDelete
  2. ಕಟು ಸತ್ಯ ಅಲ್ವ ವಿನಯ್ ...!!? ಯಾರ ಬಾಯಲ್ಲಿ ಕೆಲರು ಆ ಆಂಟಿ ಸೂಪರ್ ಮಗಾ ಅಂತಾನೆ ಬರುತ್ತೆ..!!

    ReplyDelete
  3. ಅರೆ ಅದು ಕೋಡ್ ವರ್ಡ್..... ಮದುವೆ ಆದವರಿಗೆ special TAG........ ha ha......

    ReplyDelete
  4. ಬರಿ ಕೋಡ್ ವರ್ಡ್ ಅಷ್ಟೇ ಆಗಿದ್ರೆ ನಾ ಇಷ್ಟು ಬರಿತಿರ್ಲಿಲ್ಲ ಬಿಡಿ.. ಅಂದ ಹಾಗೇ TAG caps ಅಲ್ಲಿ ಇದೆಯಲ್ಲ ಅದೂ ಕೂಡ ಏನಾದರೂ ಕೋಡ್ ವರ್ಡ್ - ಆ ಮತ್ತೆ.... ? ;) ;)

    ReplyDelete
  5. ಇಲ್ಲಪ ಕೋಡ್ ವರ್ಡ್ ಅಲ್ಲ ಸುಮ್ಮನೆ stress ಮಾಡಿದ್ದೆ ಅಷ್ಟೇ ........

    ReplyDelete
  6. Hmm....

    e hudgi ( aunty??? ) and e baraha sooper maga !!!!

    ReplyDelete
  7. ha.ha.ha... Thank you Praveen... ni kathe bariti heli maatu kottava ellode...!! nin lekhani matond kavana ne bardbutidaku..!? :)

    ReplyDelete
  8. ಈ ನಿಮ್ಮ ಭಾವ ಚಿತ್ರ ನೋಡಿದರೆ ಯಾರು ತಾನೆ ನಿಮ್ಮನ್ನು ಹುಡುಗಿ ಅಂತಾರೆ ......!
    ಬಿಡಿ ನಿಮ್ಮ ವಿಷಯಕ್ಕೆ ಬಂದರೆ , ಒಂದು ಹೆಣ್ಣಿಗೆ ಇನ್ನೊಂದು ಹೆಣ್ಣು ಶತ್ರು ಎನ್ನುವದನ್ನು ಬಹಳ ನಿಷ್ಠುರವಾಗಿ, ಅಷ್ಟೇ ಪ್ರಾಮಾಣಿಕವಾಗಿ ಒಪ್ಪಿಕೊಂಡಿದಿರಾ. ಇದು ಅವರಂತೆ ನಾನಾಗಬಾರದು ಎನ್ನುವದಕ್ಕೋ! ಅಥವಾ ಅವರ ನಿಜ ಬಣ್ಣವನ್ನು ಬಯಲು ಮಾಡುವದಕ್ಕೋ ಇಂತಹ ಒಂದು ಬರವಣಿಗೆಯನ್ನು ನಿಡಿರುವದು ನಾ 'ಕಾಣೆ' ಅಲ್ಲದೇ ಸಿಟಿ ಅಂಟಿಯರ ಬಾಯಿ ಚಪಲದ ಬಗ್ಗೆ ಕೊಟ್ಟಿರುವ ಒಳ್ಳೆಯ ಉದಾಹರಣೆಗೆ ನನ್ನ ಶುಕ್ರಿಯಾ.
    ಇಲ್ಲಿ ಇನ್ನೊಂದು ವಿಷಯ, ನೀವು ಈ ಮೇಲೆ ಹೇಳಿದ ಹಾಗೆ ಅಂಟಿಯರು ಈ ಮೊದಲು ಅಂದರೆ ನಿಮ್ಮ ಹಾಗೆ ಇದ್ದಾಗ ಅವರೂ ಕೂಡ ಪ್ರಪಂಚ ಕಂಡಿರದ ಹುಡುಗಿಯರು ನಂತರ ಪ್ರಪಂಚಕ್ಕೆ ಹೊಂದಿಕೊಳ್ಳುವ ಸಣ್ಣ ಪ್ರಯತ್ನ, ಇದರಲ್ಲಿ ಸಹವಾಸ, ಅಕ್ಕಪಕ್ಕದವರ ಸ್ನೇಹ, ಸ್ನೇಹಿತೆಯರ ಹೃದಯ(ಚು)'ಚ್ಚು'ವ ಮಾತು ಈ ಎಲ್ಲ ಕಾರಣಗಳು ಅವರನ್ನು, Beauty Parlor ನಲ್ಲಿ ಠಳಾಯಿಸುವಂತೆ ಮಾಡುತ್ತದೆ....
    ಇನ್ನೊಂದು ಕೇಳಿ ನಿಜವಾದ ವಯಸ್ಸು ಆರಂಭವಾಗುವದೆ ಈ ಮಧ್ಯ ವಯಸ್ಸಿನಲ್ಲಿ ಆಗ ವಯಸ್ಸಾಯಿತು ಎನಿಸಿದರು ಅಸೆ, ಚಪಲಗಳು ಚಿಗುರೊಡೆಯಲಾರಂಬಿಸುತ್ತವೆ. ಆಗ ಈ ಎಲ್ಲ ಸರ್ಕಸ್ ಅತ್ಯವಶ್ಯವಾಗುತ್ತದೆ ಅದಕ್ಕೆ ಅವರು ಭಾಹ್ಯ ಸೌಂದರ್ಯಕ್ಕೆ ಮೊರೆ ಹೋಗುವದು. ಇದು ಸಿಟಿ ಅಂಟಿಯರಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ......
    ಇಲ್ಲಿ ಹುಡುಗರಿಗೆ ಅಂಟಿಗಳ ದಾಹ ಅನ್ನುವದಕ್ಕಿಂತ ಅಂಟಿಗಳ ಮೋಹ ಹುಡುಗರ ಮೇಲಿನ ದಾಹ ಅನ್ನುವದು ಸೂಕ್ತ. ತಿಂಗಳುಗಟ್ಟಲೆ....... ಅಲ್ಲಲ್ಲಾ ವರ್ಷಗಟ್ಟಲೆ ಹುಡುಗಿಯರ ಹಿಂದೆ ಬಿದ್ದು, ಸುಸ್ತಾಗಿ, ಬಳಲಿ ಬೆಂಡಾಗಿ ಕೊನೆಗೆ Result 'ZERO ' ಇದನ್ನು avoid ಮಾಡಲು shortcut ರಸ್ತೆಯೇ ಅಂಟಿ ಪ್ರೀತ್ಸೆ, ಆಮೇಲೆ ಅಂಟಿ....ನೀ....'ತು' ....oಬಾ ....'ತು......oಟಿ'.....! ಎನ್ನುವದು.
    ಇದರಿಂದ ಹುಡುಗರ ಮನಸ್ಸನ್ನು ಅರ್ಥಮಾಡಿಕೊಳ್ಳದ MODERN ಹುಡಿಗಿಯರಿಗಿಂತ... ಅಂಟಿಯವರೇ THE BEST .
    ಇವನ್ನು ನೋಡುವ ಹುಡಿಗಿಯರಿಗೆ 'ಓ' ಅಂತ ಹುಡುಗ ನಮಗೆ ಸಿಗುತ್ತಿಲ್ಲಾ ಎನ್ನುವ ಈ ನಿಮ್ಮ ಜಲಸೆ ಖಂಡಿತ ನನಗೆ ಅರ್ಥವಾಗುತ್ತದೆ.
    ಈ ಮೇಲಿನ ಮಾತು 'ಹಾಗೇ ಸುಮ್ಮನೆ' ಯ ಅನಿಸಿಕೆ, ಇದನ್ನು Just take it ...........
    ಒಟ್ಟಾರೆಯಾಗಿ, ಅಂಟಿಯರ ಅಂಟು..... ಹುಡುಗರ ನಂಟು...... ಇದೂ ಹೀಗು ಉಂಟು ........ ಇದು ನಿಮ್ಮ ಮಾತುಂಟು....ವ್ಹಾ....ವ್ಹಾ...ವ್ಹಾ....ವ್ಹಾ...ಇದು ಹುಡುಗಿಯರಿಗೆ ಬಿಡಿಸಲಾಗದ ಗಂಟು ......ಗಂಟು ......ಕಗ್ಗಂಟು .....ಇದು ನನ್ನ ಹೇಳಿಕೆಯುಂಟು.......
    ಇಂತಿ ನಿಮ್ಮ ಪ್ರೀತಿಯ ನಾಗು.......

    ReplyDelete
  9. ಪ್ರತಿಕ್ರಿಯೆಗೆ ಧನ್ಯವಾದ...
    ಮೊದಲಿಗೆ ನಾನು ಬರೆದದ್ದು ಸುಮ್ಮನೆ ಒಂದು ಹಾಸ್ಯ ಅಷ್ಟೇ.. ಯಾರನ್ನೇ ಆಗಲಿ ಹೀಯಾಳಿಸಿದ್ದಲ್ಲ ಮತ್ತು ಶತೃತ್ವದ ಮಾತೆ ಇಲ್ಲಾ... ಸುಮ್ಮನೆ ನಗಿಸುವ ಒಂದು ಪ್ರಯತ್ನ ಅಷ್ಟೇ.. ನಾವು ಹಾಗಾಗದೆ ಇರುವ ಪ್ರಯತ್ನವಂತೂ ಖಂಡಿತ ಇದೆ... ಮಧ್ಯ ವಯಸ್ಸಿಗೆ ನಿಜವಾದ ವಯಸ್ಸು ಪ್ರಾರಂಭವಾಗಬಹುದು ಅದನ್ನು ಅಲ್ಲಗಳೆಯಲಾರೆ... ಆದರೆ ಎಂದಿದಿದ್ದರೂ ನೈಸರ್ಗಿಕ ಸೌಂದರ್ಯ ಮತ್ತು ಆಂತರಿಕ ಸೌಂದರ್ಯಕ್ಕೆ ಬೆಲೆ ಜಾಸ್ತಿಯೇ ಹೊರತು, beauty parlor ಗಳಲ್ಲಿ ದಿನಗಟ್ಟಲೆ ಕುಳಿತು ಸೌಂದರ್ಯ ವರ್ಧನೆ ಮಾಡಿಕೊಳ್ಳುವುದಕ್ಕಲ್ಲ... ನಮ್ಮ ಕಡೆ make up ಜಾಸ್ತಿಯಾದಾಗ ಹೇಳುತ್ತಾರೆ 'ಅದೆಂತ ಆಟ ಕುಣ್ಯವರ ಹಾಂಗೆ ಕಾಣ್ತು' ಅಂತ....ಅಂದರೆ ಯಕ್ಷಗಾನದ ಪಾತ್ರ ಹಾಕಿದವರ ಹಾಗೇ ಎಂದು... ಒಂದು ವಿಷಯ ಸ್ಪಷ್ಟ ಪಡಿಸುತ್ತೇನೆ... ಎಷ್ಟೇ ಚಪಲ ಜಾಸ್ತಿಯಾಯಿತೆಂದು ಸುಂದರವಾಗಲು,ಸಣ್ಣವರಂತೆ ಕಾಣಲು ಪ್ರಯತ್ನಿಸಿದರೂ ವಯಸ್ಸನ್ನು ಮಾತ್ರ ಹಿಡಿದಿಟ್ಟುಕೊಳ್ಳಲಾಗದು ಅಲ್ಲವೇ... ಅವರಿವರು ಹೇಳುತ್ತಾರೆಂದು ಕೇಳುತ್ತ ಕುಳಿತರೆ ಆದೀತೆ..??! ಇನ್ನು ಹುಡುಗರ ಬಗ್ಗೆ ಹೇಳುವುದಾದರೆ... ಎಷ್ಟೋ ಜನರನ್ನು ನೋಡಿಯೇ ಈ ಬಗ್ಗೆ ಬರೆದಿರುವುದು.. ಹುಡುಗಿಯ ಹಿಂದೆ ಹೋದರೆ ಸಿಗುವುದು 'zero' ಎಂಬುದು ಅನುಭವದ ಮಾತಿದ್ದಹಾಗಿದೆಯಲ್ಲ..!! and also ಹುಡುಗರು ಆಂಟಿಯ ಹಿಂದೆ ಸುಳಿದಾಡಿದರೆ 'J' factor ನನಗಂತೂ ಖಂಡಿತ ಇಲ್ಲಾ....! ಬೇರೆ ಹುಡುಗಿಯಿರ ಬಗ್ಗೆ ಸಮೀಕ್ಷೆ ನಡೆಸಿ ಬೇಕಾದರೆ ಹೇಳುತ್ತೇನೆ...!!ಅವರವರ ಭಾವಕ್ಕೆ.... ಅವರವರ taste n preference ಗೆ ನನ್ನ ಜೈ ಹೋ........
    ನಿಮ್ಮ ಉಂಟೋ...ಅಂಟೋ... ನಂಟೋ... ಅದು ನಮಗಂತೂ ಕಗ್ಗಂಟಲ್ಲ ....!! ಎದುರಿಗಿರುವ ಸಹಜ ನಿತ್ಯ ಸತ್ಯ....!!!

    ReplyDelete
  10. ಬ್ರಹತ್ ನಗರದಲ್ಲಿನ "ತಿಂಡಿ ಪೋತ ಗಜಗಾಮಿನಿಯರನ್ನು " ಸೊಗಸಾಗಿ ವರ್ಣಿಸಿದ್ದೀರಿ.... ಬಹುತೇಕರು "ಮೂರ್ಖ ಪೆಟ್ಟಿಗೆಯ " ದಾಸರಾಗಿರುವುದಂತು ಸತ್ಯ ... ಇನ್ನು ಕೊನೆಯಲ್ಲಿ ನಿಮ್ಮ ಪ್ರಶ್ನೆ ,ಹುಡುಗರಿಗೆ ಆಂಟಿಯರ ಬಗೆಗಿನ ಮೋಹಕ್ಕೆ ನಿಮ್ಮ ಬರಹದ ಮೊದಲ ಪ್ಯಾರದಲ್ಲಿಯೇ ಉತ್ತರ ದೊರೆಯಬಹುದೆಂದು ನನ್ನ ಅನಿಸಿಕೆ... ನೀವೇ ಹೇಳಿರುವಂತೆ "ಹುಡುಗಿಯರನ್ನು ಆಂಟಿಯರೆಂದು ಸಂಭೋದಿಸುತ್ತಾರೆ "..!!

    ReplyDelete
  11. ಧನ್ಯವಾದಗಳು...
    ನನ್ನ ಪ್ರಶ್ನೆಗೆ ಅದೇ ಉತ್ತರವೆಂದು ಪೂರ್ತಿಯಾಗಿ ನಂಬಲಾರೆ.. ಏಕೆಂದರೆ ಹುಡುಗರು ಹುಡುಗಿಗೆ ಆಂಟಿ ಎಂದು ಸಂಭೋದಿಸಿ ಮಾತಾಡುತ್ತಿದ್ದಾರೋ ಇಲ್ಲಾ ಆಂಟಿಯ ಕುರಿತೇ ಹೇಳುತ್ತಿದ್ದಾರೋ ಎಂಬುದನ್ನು ಪರಾಮರಿಸಿದ್ದೇನೆ...!! ಹಾಗಂತ ಎಲ್ಲರಿಗೂ ಆಂಟಿಯ ಮೋಹವೆಂದೂ ಹೇಳಲಾರೆ..ಮೇಲೇ ಹೇಳಿದ್ದೆನಲ್ಲ ಅವರವರ taste n preference ಅಂತ... ;) :)

    ReplyDelete
  12. This comment has been removed by a blog administrator.

    ReplyDelete
  13. ಮೊದಲಿಗೆ....
    ನೀವು ಬರೆದಿದ್ದು "ಸುಮ್ಮನೆ" ಅದು ಒಂದು ಹಾಸ್ಯ ಅಷ್ಟೆ... ಅದಕ್ಕೆ ನಾನು ಹೇಳಿದ್ದೇನೆ, ಹಾಗೆ ಸುಮ್ಮನೆ ಅಂತ ಹಾಸ್ಯಕ್ಕೆ ಸ್ವಲ್ಪ ವಿವಿಧ ಭಂಗಿಯ ಹೊಳಪನ್ನು ನೀಡಿದ್ದೇನೆ.ಅದರಲ್ಲಿ ಕೆಲವೊಂದನ್ನು ಒಪ್ಪಿಕೊಂದಿದ್ದಿರಿ. ಭಾಹ್ಯ ಸೌಂದರ್ಯ ಕೇವಲ ಕೆಲ ಕ್ಷಣಗಳಿಗೆ ಮಾತ್ರ ಸೀಮಿತ! ಆಟ ಕುಣ್ಯವರು ತುಂಬಾ ಹೊತ್ತು ಬಣ್ಣದ ಲೋಕದಲ್ಲಿ ವಿಹರಿಸುವದು ಸಾಧ್ಯವಿಲ್ಲ. ಇದ್ದ ಅಲ್ಪ ಸಮಯದಲ್ಲಿ ತಾವು ಆನಂದಿಸಿ ಇನ್ನೊಬ್ಬರನ್ನು ಆನಂದಿಸುತ್ತಾರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ನಂತರ ನೀವೇ ಹೇಳಿದ ಹಾಗೆ ವಯಸ್ಸನ್ನು ಹಿಡಿದಿಟ್ಟುಕೊಂಡು, ಚಪಲ ಪುರ್ತಿಯಾಗಿಲ್ಲವಾದರು ತಕ್ಕ ಮಟ್ಟಿಗೆ ತೀರಿಸಿಕೊಳ್ಳುವ ಯತ್ನಕ್ಕೆ ಈ makeup ನ ಸಹಾಯಕ್ಕೆ ಅಂಟಿಯರು ಮುಖನಿಡುತ್ತಾರೆ. ಇಲ್ಲಿ ಇನ್ನೊಂದು ಮುಖ್ಯ ವಿಷಯ ಹೆಣ್ಣುಮಕ್ಕಳಿಗೆ ಯಾರು ಹೊಗಳುತ್ತಾರೆ ಅವರ ಮಾತು ವೇದವಾಕ್ಯವಾಗಿಬಿಡುತ್ತದೆ. ಅದು ಅವರನ್ನು ಹಾಳುಮಾಡುತ್ತದೆ... ಅದು ಅವರನ್ನು ಹಾಳುಮಾಡುತ್ತದೆ ಎನ್ನುವುದನ್ನು practical ಆಗಿ ಅನುಭವಿಸಿದಾಗ ತಿಳಿಯುತ್ತದೆ. ಅದು ತಿಳಿಯುವುದರೋಳಗಾಗಿ ಸಮಯ, ಯೌವನ, ಸ್ವಾಭಿಮಾನ ಎಲ್ಲವು ಕೈ ಜಾರಿರುತ್ತದೆ. ಅದ್ದರಿಂದ ಹುಡುಗಿಯರು (ಅಂಟಿಯರು) ಹೊಗಳಿಕೆಯ ಮಾತಿಗೆ ಜೋತುಬಿಳುವುದೇ ಜಾಸ್ತಿ. ಇದರಿಂದ ಬಣ್ಣದ ಮಾತಿಗಾಗಿ ಅವರು ಮುಂದೆ ಜಾತಕ ಪಕ್ಷಿಯಾಗಿಬಿಡುತ್ತಾರೆ.

    ಇನ್ನು ಹುಡುಗರ ಬಗ್ಗೆ ಹೇಳುವುದಾದರೆ....ಎಷ್ಟೋ ಜನರನ್ನು ನೋಡಿಯೇ ಈ ಬಗ್ಗೆ ಬರೆದಿರುವುದು....ಎಂದಿದ್ದೀರಿ ಅಂದ್ರೆ ಎಷ್ಟು ಹುಡುಗರನ್ನು ನೀವು ಕಂಡಿರಬಹುದು.......! ಅವರನ್ನು ಹೇಗೆ ಅರ್ಥ ಮಾಡಿಕೊಂಡಿದ್ದಿರಾ ಎನ್ನುವುದನ್ನು ನಾ ಅರಿಯೆ......ಅದರ ಅರ್ಥ ಕೂಡ ನನಗೆ ತಿಳಿಯುತ್ತಿಲ್ಲ...

    ಹುಡಿಗಿಯರ ಹಿಂದೆ ಹೋದರೆ ಸಿಗುವುದು zero ಎಂಬುದು ಅನುಭವದ ಮಾತಲ್ಲ ಲೋಕ ರೂಡಿ ಮಾತು ಇನ್ನು ನನ್ನ ಅನುಭವಕ್ಕೆ ಬಂದರೆ ಹುಡಿಗಿಯರ ಹಿಂದೆ ಬಿದ್ದು ಅಂಗಿಯನ್ನು ಹರಿದು ಕೊಳ್ಳುವುದಕ್ಕಿಂತ ಇಷ್ಟ ಪಟ್ಟು ಬರುವವಳ ಕೈಯಲ್ಲಿ ಬಟನ್ ( ಅಂಗಿಗೆ ಗುಂಡಿ ಹಚ್ಚಿಸಿಕೊಳ್ಳುವದು) ಇದು ನನ್ನ ಅನಿಸಿಕೆ. ಅಂದ್ರೆ ನಾನು ಇನ್ನೊಬ್ಬರನ್ನು ಪ್ರಿತಿಸುವುದಕ್ಕಿಂತ ನಮ್ಮನ್ನು ಪ್ರಿತಿಸುವವರನ್ನು ಇಷ್ಟಪಡುವದು........ ಮನಸ್ಸಿಗೆ ನೆಮ್ಮದಿ, ಹಿತ, ಇದು ನನ್ನ ಜಾಯಮಾನ.

    ಇನ್ನು ಎಲ್ಲಿಯವರಿಗೆ ಬಂತು ನಿಮ್ಮ ಸಮೀಕ್ಷೆ.......... ?
    ಇದು ಪ್ರತಿನಿತ್ಯ ಎದುರಿಗಿರುವ ಸತ್ಯ. ಅವರವರ ಭಾವಕ್ಕೆ ಅವರವರ taste ಗೆ ನಾನು ಕೂಡ ಜೈ ಹೋ ....ಎನ್ನುವೆ.

    ಈ ಪ್ರತಿಕ್ರಿಯೆ ಕೂಡ ಹಾಗೆ ಸುಮ್ಮನೆ......
    ಇದನ್ನು ಓದಿ ಗುಮ್ಮನಿ ತಂದುಕೊಳ್ಳಬೇಡಿ ............
    ಇದನ್ನು ಹಾಗೇ ಎಡ ಕಣ್ಣಿನಿಂದ ಓದಿ ಬಲ ಕಣ್ಣಿನಿಂದ ಬಿಡುವಿರಿ ಎಂದು ಉಹಿಸುತ್ತ ..........ಧನ್ಯವಾದಗಳೊಂದಿಗೆ Sign off ಮಾಡುತ್ತಿರುವ ನಾನು ನಾಗು ನಿಮ್ಮ ತುಟಿ ಮೇಲಿನ ನಗು..........

    ReplyDelete
  14. ಅನಾವಶ್ಯಕ ಅನ್ಯಥಾ ಭಾವಿಸುತ್ತಿದ್ದೀರಿ.. i have many cousins & so many friends... ಅವರು ಸುಮ್ಮನೆ ಆಂಟಿಗಳ ಬಗ್ಗೆ ಹರಟುವುದನ್ನು ಕೇಳಿದ್ದೇನೆ.. ಅದರ ಆಧಾರದಲ್ಲಿ ಹೇಳುತ್ತಿರುವುದೇ ವಿನಃ ಮತ್ತೇನೂ ಇಲ್ಲಾ... ಅದೇಕೆ ನೀವು ಸುಮ್ಮನೆ ನಗಿಸಲು ಮಾಡಿದ ಪ್ರಯತ್ನವನ್ನು ಅಷ್ಟೊಂದು ಮನಸ್ಸಿಗೆ ಹಾಕಿಕೊಂಡಿದ್ದೀರಿ ನಾ ಅರಿಯೆ...!! ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ್ದನಂತೆ ಎಂದ ಹಾಗಾಯ್ತು... ಇಷ್ಟಕ್ಕೂ ಹುಡುಗರು ಆಂಟಿಯರ ಹಿಂದೆ ಬೀಳಲಿ ಹುಡುಗಿಯರ ಹಿಂದೆಯೇ ಬೀಳಲಿ, i'll never mind.... ಹೌದು ಬರೀ ಹುಡುಗಿಯ ಹಿಂದೆ ಹೋದರೆ ಫಲಿತಾಂಶ ಸೊನ್ನೆ ಎಂಬುದನ್ನು ಅದೇಕೆ ಅಷ್ಟೂ ಒತ್ತಿ ಒತ್ತಿ ಪದೇ ಪದೇ ಹೇಳುತ್ತಿದ್ದೀರಾ ತಿಳಿಯುತ್ತಿಲ್ಲ (ಅನುಭವಸ್ಥರಂತೆ) ....!! ಇಷ್ಟಕ್ಕೂ ಮೇಲೆ ಹೇಳಿದ ಆಂಟಿಯರ ಯಾವುದೇ ಖಯಾಲಿಗಳನ್ನಾಗಲೀ ಅಥವಾ ಹುಡುಗರ ಉದ್ದೇಶವನ್ನಾಗಲೀ ನಾನು ತಪ್ಪು ಎಂದು ಹೇಳೇ ಇಲ್ಲಾ... ತಿಳಿ ಹಾಸ್ಯವನ್ನು ಅದೇಕೋ ಇಷ್ಟೊಂದು ವಿಮರ್ಶಿಸುತ್ತಿದ್ದೀರಿ...anyways in any means my article hurts you 'm sorry.....!!! take it as just a joke thats all i can say.... :) :)

    ReplyDelete
  15. ಹಹ್ಹಾ.. ಚೆನ್ನಾಗಿ analyse ಮಾಡಿ ಬರದ್ದೆ.. :)

    ReplyDelete
  16. ಹ ಹ ಹ ಹ ಆಂಟಿಗಳ ಕುರಿತಾದ.. ಹಾಸ್ಯ ಲೇಖನ.. ಚನ್ನಾಗಿದೆ..

    ReplyDelete
  17. ಧನ್ಯವಾದಗಳು... ಪ್ರೋತ್ಸಾಹ ಹೀಗೇ ಇರಲಿ... :) :)

    ReplyDelete