Thursday, March 10, 2011

ಗೆಳೆಯಾ, 
     ಅಂದಿನ ನಮ್ಮ ಮೊದಲ ಭೇಟಿ 
ಸೋನೆ ಮಳೆ ಬಂದು ನಿಂತ 
     ತಂಪಿನಂತಿತ್ತು........
ತರುಲತೆಗಳಿಂದುದುರುವ ಮಳೆ ಹನಿಗಳು 
     ನಿನ್ನ ಮುದ ನೀಡುವ ಮಂದಹಾಸವನ್ನು 
ನೆನಪಿಸುವಂತಿತ್ತು........
     ಆದರೆ, 
ಇಂದೇಕೆ ತನ್ನ ಸರ್ವಸ್ವವನ್ನೂ ಕಳೆದುಕೊಂಡ 
     ವೃಕ್ಷದಂತಾಯ್ತು  ನಮ್ಮ ಪ್ರೇಮ....?!?
ಬರಿದಾದ ಮರಗಳು ನನ್ನ ನೋಡಿ
     ಕುಹುಕದಿ ನಗುತಿವೆ.......
ವಸಂತದ ಬರುವಿಕೆಗಾಗಿ ಕಾಯುತ್ತಿರುವ 
     ಮರಗಳನ್ನು ಕಣ್ಣಂಚಿನ ನೀರಿನೊಂದಿಗೆ 
ನೋಡುತ್ತಾ ಕುಳಿತಿದ್ದೇನೆ.......
     ಮನಸು ಸಾವಿರ ಬಾರಿ ಪ್ರಶ್ನಿಸುತ್ತಿದೆ
ಮುಂದಾದರು ಬರಬಹುದೇ ನಿಮ್ಮ ಬಾಳಿನಲ್ಲಿ 
     ಈ ವಸಂತದ ಸಂಭ್ರಮ....?!!
ಮತ್ತೆ ಚಿಗುರಬಹುದೇ ನಿಮ್ಮೆಲ್ಲಾ 
     ಸುಂದರ ಕನಸು....??!


ಮಂಜಿನ ಮುಂಜಾವಿನಲಿ 
       ನೀ ಜೊತೆಗಿರಲು.....
ಬೆಳ್ಳಗಿನ ಬೆಳದಿಂಗಳಿನಿರುಳಲಿ 
       ನೀ ಬಿಗಿದಪ್ಪಲು......
ಹುಣ್ಣಿಮೆಯ ಕತ್ತಲಲಿ 
       ನಿ ಮುದ ನೀಡಲು.....
ಮಾಗಿಯ ಚಳಿ ಗಾಳಿಯಲಿ 
       ನಾವ್ ತೇಲಿ ಹೋಗಲು.....
ಭೋರ್ಗರೆವ ಸಾಗರ ಗರ್ಭದಲಿ
       ನಾವ್ ಕರಗಿ ಹೋಗಲು.....
ಸುಂದರ ಪ್ರಕೃತಿಯೊಳು
       ನಾವೈಕ್ಯವಾಗಲು.......
ಈ ಜೀವನಕ್ಕೆ ಇನ್ನೇನು ಬೇಕು ಗೆಳೆಯಾ......
ಸತ್ತು ಕಾಣುತ್ತೇವೆಂಬ  ಸ್ವರ್ಗಕ್ಕಿಂತ
ನಿನ್ನ ಒಂದು ಭಾಗವಾಗಿ ಪಡೆಯುವ ಆನಂದವೇ 
ನನಗೆ ಜನ್ಮಜನ್ಮಾಂತರದ ಸ್ವರ್ಗ......



ನನ್ನಿನಿಯ ಬಳಿ ಬಂದ
     ಪಡೆಯಲೆಂದು ಕರುಳಿನ ಕುಡಿ,
ತಕ್ಷಣವೇ ಕೂಗುತ ಸರಿದೆ - 
     'ಮುಟ್ಟಬೇಡ ನಾನಿನ್ನು ಮೂರು ದಿನ ಮಡಿ....!!!




ನಿನ್ನ ವದನದೊಳೀಗ 
     ಚಿಮ್ಮುತಿರುವ ಆ ನಗೆಗೆ,
ನಾಚಿಕೆ ಧೈರ್ಯವಾಗಿ 
     ಬದಲಾಗುತ್ತಿರುವ ಆ ಬಗೆಗೆ, 
ನೀ ನೋಡುವ ಆ ಪರಿಗೆ...
     ಉಪಮೆಯೆಲ್ಲಿದೆ...?!
ನಯನದೊಳು ನಯನ
     ಬೆರೆತಾಗಿನ ಆ ಮೂಕ 
ಭಾವನೆಗೆ ಕೊನೆಯೆಲ್ಲಿದೆ...?!
     ಅನು ದಿನವೂ ಉದ್ಭವಿಸುವ 
ಸಹಸ್ರಾರು ಪ್ರಶ್ನೆಗಳಿಗೆ 
     ಉತ್ತರವೆಲ್ಲಿದೆ...?!
ನಿ ಇದಕ್ಕೆಲ್ಲ ಉತ್ತರಿಸುವೆಯೆಂದು 
      ಕಾಯುತ್ತಿರುವ ನನ್ನ ತಾಳ್ಮೆ 
ಮುಗಿಯುವುದೆಂದಿಗೆ....?!

8 comments:

  1. Kavanagalu tumba khushi kottavu. All the best.

    ReplyDelete
  2. ತುಂಬಾ ಚೆನ್ನಾಗಿದೆ....

    ReplyDelete
  3. ಕವನ ತುಂಬಾ natural ಆಗಿ ಬೈಂದು....
    'ಮುಟ್ಟಬೇಡ ನಾನಿನ್ನು ಮೂರು ದಿನ ಮಡಿ....!!! ಈ ಸಾಲಿನ ಕೆಳಗಡೆ ಹಾಕಿದ ಫೋಟೋ ಅಂತೂ ಆ ಸಾಲಿಗೆ ಸಕತ್ suit...
    ಚಂದ ಬರದ್ದೆ...

    ReplyDelete