ನಿನ್ನ ಮೊದಲಿನಂತಿನ ಪಟ ಪಟ ಮಾತು
ನನ್ನನ್ನು ಮರೆವಿನಿಂದ ನೆನಪಿನಾಳದತ್ತ ಸೆಳೆಯುತ್ತಿದೆ...
ಎಂದೋ ಹುದುಗಿ ಹೋದ ಮಧುರ ನೆನಪುಗಳು
ಮತ್ತೆ ಕೆದಕುತ್ತಿದೆ.....
ನಿನ್ನ ನಗು ಆ ಹಳೆಯ ನಗೆಯ
ನೆನಪಿನಲ್ಲಿಗೆ ಎಳೆಯುತ್ತಿದೆ....
ದೂರಾಗುವೆ ಎಂದು ತಿಳಿದು ನೆನಪನ್ನೆಲ್ಲಾ
ಮರೆತು ಕುಳಿತರೂ......
ಮರೆಯಾಗಿಯೂ ನೆನಪಿಸುತ್ತಿರುವ
ಮರೆತ ಆ ಹಳೆಯ ನೆನಪು....
ಮರೆತೆನೆಂದೇ ಕುಳಿತುಬಿಟ್ಟಾಗ
ಒತ್ತರಿಸಿ ಬಂದ ಆ ನಿನ್ನ ನೆನಪು....
ಮನಸನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ !
ಇನ್ಯಾರಲ್ಲಿ ಹೇಳಲಿ ನನ್ನ ಒಡಲಾಳದ ನೋವ,
ನೀನೆ ತಿಳಿಯದಿದ್ದ ಮೇಲೆ.....
ಕಾವ್ಯಾ


ಕಾವ್ಯ ನಿಮ್ಮ ಕವನ ತುಂಬಾ ಅರ್ಥಗರ್ಭಿತವಾಗಿದೆ
ReplyDeleteಯಾವುದೊ ನೆನಪಿನ ಲೋಕದಲ್ಲಿ ವಿಹರಿಸಿದಂತಿದೆ.
ಕೊನೆಯಲ್ಲಿ ತುಂಬಾ ಟಚ್ ಆಗುತ್ತೆ.
ತುಂಬಾ ತುಂಬಾ ಧಬ್ಯ್ವದಗಲ್ಯ್ ನಿಮ್ಮ ಸಾಹಿತ್ಯ,ಕವನಗಲ್ ಶೈಲಿಗೆ
ಅನಂತ್.
ಧನ್ಯವಾದಗಳು ಅನಂತ್ ಸರ್.... ನಿಮ್ಮ ಪ್ರೋತ್ಸಾಹ, ಆಶೀರ್ವಾದ ಹೀಗೇ ಇರಲಿ... :) :)
ReplyDeletenice kayva........... nenapinaaladallondu payana..
ReplyDeleteಇ ನಿಮ್ಮ ನೋವಿನ ಮಾತು ನಿಮ್ಮ ಮನಸ್ಸನ್ನು ಹಿಂಡಿ ಬರೆದಂತಿದೆ.........ಪಾಪ ಇದರ ನಡುವೆ ಆ ನಿಮ್ಮ ಪುಟ್ಟ ಹೃ ದ ಯ ಅದೆಷ್ಟು ರಕ್ತ ವನ್ನು ಹರಿಸಿದೆಯೋ ಅದೆಷ್ಟು ನೋವನ್ನು ತಿನ್ದಿದೆಯೋ.................? ನೆನೆಸಿ ಕೊಂಡರೆ ಅಬ್ಭಾ........! ತುಂಭಾ ನೋವಾಗುತ್ತದೆ.......ಅಷ್ಟೊಂದು ಯೋಚನೆ ಮಾಡಬೇಡಿ ಪಾ.........ಮಧುರ ನೆನಪುಗಳು ಇದೆಯಲ್ಲ ಅದನ್ನು ಮರೆಯಲು ಯಾರಿಂದಲು ಸಾದ್ಯವಿಲ್ಲ. ಅದು ಕೊನೆಯ ಉಸಿರು ಇರುವ ವರೆಗೂ ನಮ್ಮ ಹಿಂದೆಯೇ ಇರುತ್ತದೆ. ಅದರಲ್ಲಿ ಇ ತುಂಟ ನಗೆ,ಮೋಹಕ ನೋಟ, ಸುಂದರ ಕಂಗಳು, ಹಿತವಾದ ಮಾತುಗಳು, ಪರಸ್ಪರ ಹಂಚಿಕೊಂಡ ಸುಖ ದುಃಖ, ಹೃದಯಕ್ಕೆ ಹತ್ತಿರವಾಗಿ ಮನಸ್ಸಿನಲ್ಲಿ ಮನೆ ಮಾಡಿ ಬಿಡುತ್ತದೆ.ಹಳೆಯ ನೆನಪುಗಳನ್ನು ಹೊಸ ಯೋಚನೆ ಗಳೊಂದಿಗೆ ಒಳ್ಳೆಯ ಗೆಳೆಯರೊಂದಿಗೆ ಒಡಲಾಳದ ನೋವನ್ನು ಹಂಚಿ ಕೊಳ್ಳಿ ಆಗ ನಿಮ್ಮ ಮನಸ್ಸು, ಹೃದಯ ಸಂತೋಷವಾಗಿರುತ್ತದೆ.
ReplyDeleteಇನ್ನೊಂದು ಮಾತು ತಮಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳಲು ಯಾರು ಸಿಗದಿದ್ದರೆ ನನ್ನಮುಂದೆ ಹಂಚಿಕೊಳ್ಳಭವುದು..........ಅದು ಇಫ್ u ಡೋಂಟ್ ಮೈಂಡ್ ..........ಓಕೆ ನಾ..........
ಇಂತಿ ನಿಮ್ಮ
ನಾನು ನಗು ನಿಮ್ಮ ತುಟಿ ಮೇಲಿನ ನಗು
Nenapugale haage, madhuravaada novu :)
ReplyDeleteNice.
Thank u Pavi... :)
ReplyDelete@Nagaraj: nanage ashtondu novilla bidi... nanna hrudaya kooda rakta harisuvashtu novu kandilla... enadaroo iddare heluttene...!!
Thanks Hegde avare... :)