Wednesday, January 25, 2012

ಹೊಸ ಬಾಳಿಗೆ ನೀ ಜೊತೆಯಾದೆ.... ಹೊಸ ಆನಂದ ನೀನಿಂದು ತಂದೆ....


ನನ್ನ ಬಾಳಿಗೆ ಬಣ್ಣ ತುಂಬಲು ಬರುತ್ತಿರುವ ನಿನಗಾಗಿ..........
       ನಿನಗಾಗಿ ಬರೆದ ಕೆಲವಾರು ಲೇಖನಗಳು ಈಗಾಗಲೇ ನನ್ನ ಬ್ಲಾಗಿನಲ್ಲಿವೆ. ನನ್ನ ಬರವಣಿಗೆಗಳು ಬ್ಲಾಗ್ ರೂಪ ಪಡೆಯಲು ಕಾರಣ ನೀನು.... ಬ್ಲಾಗ್ ಬರೆಯಲು ಶುರು ಮಾಡು ಎಂಬ ನಿನ್ನ ಒತ್ತಾಯದಿಂದ ಬರವಣಿಗೆಯತ್ತ ಮುಖ ಮಾಡಿ ಒಂದು ವರ್ಷ ಪೂರೈಸುವುದರೊಳಗೇ ನೀನೇ ನನ್ನ ಬಾಳ ಸಂಗಾತಿಯಾಗಿ ಬರುವೆ ಎಂಬುದು ಕನಸಿನಲ್ಲಿಯೂ ಅನಿಸಿರಲಿಲ್ಲ... ಅತ್ಯಂತ ಆತ್ಮೀಯ ಸ್ನೇಹಿತರಾಗಿ ಎರಡೂವರೆ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ನಮ್ಮ ಸ್ನೇಹದ ಬಗ್ಗೆ ನಾನು ಈಗಾಗಲೇ ಬರೆದಾಗಿದೆ ಮತ್ತು ಅದನ್ನು ನನ್ನ ಓದುಗರೆಲ್ಲರೂ ಓದಿಯೂ ಇದ್ದಾರೆ. ಆದರೆ ಆ ಲೇಖನದ 'ಆತ್ಮ' ನೀನೆ ಎಂದು ತಿಳಿದಿದ್ದದ್ದು ನಮ್ಮಿಬ್ಬರಿಗೆ ಮಾತ್ರ...! ಅದೆಷ್ಟು ಜನ ಓದಿ ಪ್ರಶ್ನೆ ಮಾಡಿದ್ದರೋ ಯಾರ ಬಗ್ಗೆ ಬರೆದಿದ್ದೀಯ ಎಂದು..... ಅಂತಹ ಸ್ನೇಹ ಇಂದು ನಮ್ಮ ಸಹಜೀವನಕ್ಕೆ ಬುನಾದಿಯಾಗುತ್ತದೆ ಎಂದು ಮಾತ್ರ ಇಬ್ಬರೂ ತಿಳಿದಿರಲಿಲ್ಲ ಅಲ್ಲವೇ...?! ಹುಡುಗ ಹುಡುಗಿಯ ನಡುವೆ ಬರಿದೇ ಸ್ನೇಹ ಸಾಧ್ಯವಿದೆ ಎಂಬುದನ್ನು ಸಾಧಿಸ ಹೊರಟಿದ್ದೇನೋ ನಿಜ... ಆದರೆ ನಮ್ಮ ಕಥೆಯೂ ಒಂದೇ ತರಹದ ಕೊನೆ ತಲುಪಿತಲ್ಲ ಎಂಬ ಬೇಸರವಂತೂ ಖಂಡಿತಾ ಇಲ್ಲಾ...  ನಮ್ಮ ಸ್ನೇಹವನ್ನು ಬಲ್ಲ ಅದೆಷ್ಟು ಜನ ನೀವಿಬ್ಬರೇ ಯಾಕೇ ಮದುವೆಯಾಗಬಾರದು ಎಂದು ನನ್ನ ಬಳಿ ಹೇಳಿದ್ದಾರೆ ಗೊತ್ತಾ..!! ಆಗ ನಂಗೆ ಆಶ್ಚರ್ಯ ಆಗೋದು, ಇದೇನು ಎಲ್ಲರೂ ಹೀಗಂತಾರಲ್ಲ ಅಂತ.... ಇಂತಹ ಒಳ್ಳೆಯ ಸ್ನೇಹಿತನನ್ನೇ ನನ್ನ ಬಾಳ ಸಂಗಾತಿಯಾಗಿ ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು... 
       ನಿನ್ನ ಸ್ನೇಹವನ್ನು ಬಯಸಿ ಬಂದವಳು ನಾನು.... ನಿನ್ನ ನಾಚಿಕೆಯ ಸ್ವಭಾವವೇ ನನಗೆ ಮೊದಲಿಂದಲೂ ಇಷ್ಟವಾಗಿದ್ದು... ಅದಕ್ಕಾಗೆ ಮೊದಲಿಂದಲೂ ನಾನು ನಿನ್ನನ್ನು ಕುಕ್ಕಿ ಕುಕ್ಕಿ ಮಾತಾಡಿಸುತ್ತಿದ್ದೆ.. ವರ್ಷಗಟ್ಟಲೆ ಪ್ರಯತ್ನ ಪಟ್ಟ ಮೇಲೆ ಅಂತೂ ಸರಾಗವಾಗಿ ಮಾತಾಡಲು ಶುರು ಮಾಡಿದೆ ನೀನು... ನಿಜವಾಗಿಯೂ ನಿನ್ನೊಡನೆ ಸವಿದ ಸ್ನೇಹದ ಸವಿ ನನಗೆಲ್ಲೂ ಸಿಕ್ಕಿಲ್ಲ... ನೀನು ಮಾತಾಡದಿದ್ದರೂ ನಿನ್ನಲ್ಲಿ ಅಗಾಧ ಸ್ನೇಹವನ್ನು ಕಂಡಿದ್ದೆ.... ಈಗ ಅದೇ ಮೌನದಲ್ಲಿ ಅಷ್ಟೇ ಪ್ರೀತಿಯನ್ನು ಕಾಣುತ್ತಿದ್ದೇನೆ... ಅದೆಷ್ಟು ಒಬ್ಬರಿಗೊಬ್ಬರು ಅನಿವಾರ್ಯವಾಗಿದ್ದೆವೆಂದರೆ ನನ್ನ ಮದುವೆಯಾದರೆ ನಾವಿಬ್ಬರೂ ಈ ಸ್ನೇಹದಿಂದ ಹೇಗೆ ದೂರಾಗುವುದು ಎಂದು ದುಃಖ ಪಡುವಷ್ಟರ ಮಟ್ಟಿಗೆ...! ಈಗ ಅದಾವ ತೊಂದರೆಯೂ ಇಲ್ಲದೆ ಇಬ್ಬರೂ ಪೂರ್ತಿ ಜೀವನದ ಸವಿಯನ್ನು ಒಟ್ಟಿಗೆ ಸವಿಯುವತ್ತ ಹೆಜ್ಜೆ ಇಡಲು ಕಾತರಿಸುತ್ತಿದ್ದೇವೆ.... 
       ಯಾವ ಕ್ಷಣದಲ್ಲಿ ನಮ್ಮ ಭಾವನೆಗಳು ತಿರುಗಿದವೋ...! ತಿಳಿಯಲಿಲ್ಲ.... 'ಮನೆಯಲ್ಲಿ ಒಪ್ಪಿದರೆ ಮಾತ್ರ' ಎಂಬ ನಿರ್ಧಾರಕ್ಕೆ ಬಂದಾಗಲಂತೂ ಒಂದು ಕ್ಷಣ ಕಳೆಯುವುದೂ ಕಷ್ಟವಾಗಿತ್ತು. ಒಮ್ಮೆ ಬಿಟ್ಟು ಬದುಕಬಹುದು ದೊಡ್ಡದಲ್ಲ ಎನಿಸಿದರೂ.... ಕ್ಷಣ ಮಾತ್ರದಲ್ಲಿ ಹೇಗೆ ಎಂಬ ಪ್ರಶ್ನೆ ಧುತ್ತನೆ ನಿಲ್ಲುತ್ತಿತ್ತು....!! ಅಂತೂ ಅತ್ತೆ, ಮಾವ, ಅಪ್ಪ, ಅಮ್ಮ ಪ್ರೀತಿಯಿಂದ ಮದುವೆ ಮಾಡಲು ಒಪ್ಪಿದಾಗ ನಿಜವೇ ಇದು ಎಂದು ನಂಬಲು ನನಗಂತೂ ಬಹಳ ದಿನಗಳೇ ಹಿಡಿಯಿತು....

       ನಿನ್ನ ನಾಚಿಕೆ, ಸಂಕೋಚದ ಸ್ವಭಾವ ನನಗೆ ತುಂಬಾ ಇಷ್ಟ.... (ಒಬ್ಬರಿಗಾದರೂ ಇದೆಯಲ್ಲ ಸಾಕು ಬಿಡು ಎಂಬುದು ನನ್ನ ಸ್ನೇಹಿತರ ಅಂಬೋಣ...!) ವಸ್ತು ಸ್ಥಿತಿಯನ್ನು ಮುಚ್ಚಿಡದೆ ಇದ್ದ ಹಾಗೇ ಹೇಳಿ ಬಿಡುವ ನಿನ್ನ ಗುಣ ಇಷ್ಟ.... ನಿನ್ನ ನಗು ಇಷ್ಟ... ನಿನ್ನ voice ಅಂತೂ ಸೂಪರ್ ಇಷ್ಟ... ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರುವಂತೆ ಒಂಥರಾ decency ಯನ್ನು ಉಳಿಸಿಕೊಳ್ಳುತ್ತೀಯಲ್ಲ ಅದು ಮಾತ್ರ ಎಲ್ಲರಿಂದ ಸಾಧ್ಯವಿಲ್ಲ...! ಅದಕ್ಕೇ ನಾನು ಕ್ಲೀನ್ ಬೋಲ್ಡ್ ಆಗಿದ್ದು.... ಅದೆಷ್ಟು ಜನ ನಿನ್ನನ್ನು ಹೊಗಳುತ್ತಾರಲ್ಲ ಆಗ ಆಗುವ ಸಂತೋಷ ಕೈಗೆ ನಿಲುಕದ್ದು.... ನನ್ನ ಭಾವನೆಯ ಮಿಡಿತ ಸ್ವಲ್ಪ ವ್ಯತ್ಯಾಸವಾದರೂ ಬಾಯಿ ಬಿಡಿಸಿ ತಿಳಿದುಕೊಂಡು ನಿನ್ನ ತುಡಿತವನ್ನು ಮಾತ್ರ ನಿನ್ನ ಮೌನದಲ್ಲೇ ನಾನು ತಿಳಿದುಕೊಳ್ಳಲೆಂಬ ಹಂಬಲ ನಿನ್ನದು... ನಿನ್ನ ಮುಂದೆ ಮಾತ್ರವೇ ನನ್ನ ಸಿಟ್ಟು ಕೊಂಚ ಕೂಡ ನಿಲ್ಲದೆ ಕರಗಿ ಹೋಗುವುದು.... ನಿನ್ನನ್ನು ನನಗೆ ಕೊಟ್ಟ ದೇವರಿಗೆ ಮತ್ತೊಮ್ಮೆ ನನ್ನ ಕೋಟಿ ಕೋಟಿ ನಮನಗಳು.....


        ನನ್ನ ಪ್ರೀತಿಯನ್ನೆಲ್ಲ ನಿನಗೆ ಧಾರೆ ಎರೆಯಬೇಕೆಂಬ ಹಂಬಲವಿದೆ..... ಕಣ್ತುಂಬಾ ನಮ್ಮ ಮುಂದಿನ ಬದುಕಿನ ಕನಸಿದೆ.... ಕೊನೆವರೆಗಿನ ಸಹಬಾಳ್ವೆಯ ವಿಶ್ವಾಸವಿದೆ... ನನ್ನನ್ನು ಜತನದಿಂದ ಕಾಪಾಡುವೆಯೆಂಬ ನಂಬಿಕೆಯಿದೆ... ಬೊಗಸೆ ತುಂಬಾ ಪ್ರೀತಿಯಿದೆ... ಮನ ತುಂಬಾ ಮಮತೆಯಿದೆ.... ಒಟ್ಟಾರೆ ಕಾಯುವಿಕೆಯಲ್ಲೂ ಏನೋ ಸುಖವಿದೆ... 


ವಿವಾಹ ಯೋಗದ
ನಾದ ನುಡಿಸಿ
ಯಜುರ್ವೇದ ಘೋಷದೊಳು
ಕರಿಮಣಿ ಕುಂಕುಮ ಸೌಭಾಗ್ಯವ ದೊರಕಿಸಲಿರುವ 
                                ನಿನಗಿದು ಅರ್ಪಣೆ........



ಕಾವ್ಯಾ :) :) 

40 comments:

  1. Superooo superrrr...:) nin feelings...

    ReplyDelete
  2. ha ha ha.... thanks.. :) you are visiting, reading & understanding kannada.. thats very nice... :)

    ReplyDelete
  3. superrrrrrrr love story.........God bless u both with wonderful life.

    ReplyDelete
  4. Konegoo Nanna oohe nijavaitu. Yello medulina mooleyalli sixth sense anstitittu. Hats off to to U. I am a very happy man about your feelings about your life partner.God bless YOU and Your Would be Mr. Vinayak. Convey my best wishes to him also.Inneradu tingalu Nimma aa yerduvare vrsha dante continue maadiri.. All the best.

    ReplyDelete
    Replies
    1. ನಿಮ್ಮ ಬಾಳು ಹಸನಾಗಲಿ. ಅಭಿನ೦ದನೆಗಳು. ಗಣರಾಜ್ಯೋತ್ಸವದ ಶುಭಾಶಯಗಳು.

      Delete
  5. thanks a lot sir... I'll convey your wishes to him. :) ನಿಮ್ಮ ಸಂತೋಷಕ್ಕೆ, ನಿಮ್ಮ ಹಾರೈಕೆಗೆ ನಾನೆಂದು ಋಣಿ... :) ಆಶೀರ್ವಾದ ನಮ್ಮಿಬ್ಬರ ಮೇಲೂ ಹೀಗೇ ಇರಲಿ... :)

    ReplyDelete
  6. ನಿಮ್ಮ ಈ ಲೇಖನ ಹಾಗೆ ಮನಸ್ಸಿಗೆ ಇಷ್ಟವಾಗುತ್ತದೆ...
    ಶುಭ ಗಳಿಗೆ ಕೂಡಿ ಬಂದಿದೆ..
    ಶುಭಾಶಯಗಳು......

    ReplyDelete
    Replies
    1. ಓದಿ ಪ್ರೋತ್ಸಾಹಿಸಿದ್ದಕ್ಕೆ ಮತ್ತು ಶುಭ ಕೋರಿದ್ದಕ್ಕೆ... ಧನ್ಯವಾದಗಳು... :)

      Delete
  7. ♥♥♥♥♥ ನಿನ್ನ ಪ್ರೀತಿಯ ಧಾರೆಗೆ ಪ್ರತಿ-ಸ್ಪಂದನವಿದೆ.... ಕಣ್ಣಲ್ಲಿನ ಕನಸನ್ನು ಬಾಳಲ್ಲಿ ತರುವಲ್ಲಿ ಖುಷಿಯಿದೆ... ಸಹಬಾಳ್ವೆಗೆ ಸಾಥಿಯಾಗುವೆ.. ನಿನ್ನೆಲ್ಲಾ ನಂಬಿಕೆಯನ್ನು ಬೊಗಸಯಲ್ಲಿಟ್ಟು ಕಾಪಾಡುವೆ... ♥♥♥♥♥

    ReplyDelete
    Replies
    1. ♥♥♥♥♥♥♥♥♥♥ :) :) :) :) ♥♥♥♥♥♥♥♥♥♥

      Delete
  8. ಓಹೋ ,ಕಾವ್ಯ ಯಂಗಲ್ ಊರ(ಹೆಗ್ಗರಣಿ) ಸೊಸೆ ಅಪವ ಇದ್ದೆ:) heartly welcome in advance :)

    ReplyDelete
    Replies
    1. ಹಾಂ.... ಆ ಬದಿಗೆ ಬಪ್ಪನ ಹೇಳಿ.... :) thanks a lot... :)

      Delete
  9. ಹಾಲು ಜೇನು ಒಂದಾದ ಹಾಗೆ.............
    ಏನೇ ಹೇಳು ನಿಂಗ್ಳದ್ದೇ ಕಥೆ ಮಸ್ತ್ ಹಾಂ.....
    ನೋಡು ನಿನ್ ಪ್ರಾಣೇಶ್ವರನೂ ನಿಂಗೆ ಅಷ್ಟೇ ಪ್ರೀತಿ ಭರವಸೆ ಕೊಡ್ತಿದ್ದಾ.,....
    ಒಳ್ಳೇದಾಗ್ಲಿ.....
    ಶುದ್ಧ ಪ್ರೀತಿ ಸಿಕ್ಕಿದ್ದು.....
    ತೃಪ್ತಿ ಆಗೋವಷ್ಟು ಮೀರೋವಷ್ಟು ಹಂಚ್ಕಳಿ....
    ನನ್ ಕಡೆಯಿಂದ lot of wishes......

    ReplyDelete
  10. ನಿಜ, ಅಪ್ಪಟ ಶುದ್ಧ ಪ್ರೀತಿ ಸಿಕಿದ್ದು... :) ತುಂಬಾ ತುಂಬಾ ಧನ್ಯವಾದ ರಾಘು, ನಿನ್ನ ಹಾರೈಕೆಗೆ.... :) :)

    ReplyDelete
  11. ಬದುಕು ಬಂಗಾರ ಅಗಲಿ.ಶುಭ ಹಾರೈಕೆಗಳು :)

    ReplyDelete
    Replies
    1. ತುಂಬು ಹೃದಯದ ಧನ್ಯವಾದಗಳು, ನಿನ್ನ ಹಾರೈಕೆಗೆ... :)

      Delete
  12. ತಂಗಿ...

    ನಿನ್ನ ಬಾಳು ಯಾವತ್ತೂ ಹಸಿರಾಗಿರಲಿ...
    ನಗು, ಸಂತೋಷ ತುಂಬಿರಲಿ...

    ಆಶೀರ್ವಾದಗಳು..

    ಪ್ರೀತಿಯಿಂದ

    ಪ್ರಕಾಶಣ್ಣ/ಕುಟುಂಬ

    ReplyDelete
    Replies
    1. ಅಣ್ಣನಿಲ್ಲದ ನನಗೆ ಅಣ್ಣನಾಗಿ ಆಶೀರ್ವದಿಸಿದ್ದಕ್ಕೆ ತುಂಬು ಕಂಗಳ ಧನ್ಯವಾದಗಳು.. ಸದಾ ಅಣ್ಣ-ಅತ್ತಿಗೆಯ ಆಶೀರ್ವಾದ ಹೀಗೆಯೇ ಇರಲಿ... :) :)

      Delete
  13. ಶುಭ ಹಾರೈಕೆಗಳು ಕಾಕಾ.. ಲೇಖನ ಚೆನ್ನಾಗಿದ್ದು.. ಮಾಮೂಲಿನಂತೆ..
    ಒಂದೆರಡು ಭಾವಚಿತ್ರ ಹಾಕಿ "ಹಾಲಿನೊಂದಿಗೆ ಕೆನೆ ಬೆರೆತಂತಿದ್ದು" ಬರೆದ ಶೈಲಿ - ಸೂಪರ್..

    ಬದುಕು ಬಂಗಾರವಾಗಲಿ
    ಬಾಳು ಶೃಂಗಾರವಾಗಲಿ
    ಸುಖ, ಶಾಂತಿ, ನೆಮ್ಮದಿ ಹರಿದುಬರಲಿ.

    -ಪ್ರಕಾಶ್ ಹಲಗೇರಿ.

    ReplyDelete
    Replies
    1. ಧನ್ಯವಾದ ಪಕ್ಕು.... :) ಚಂದ ಮಾಡಿ ಹರ್ಸಿದ್ದೆ... :)

      Delete
  14. "ಹುಡುಗ ಹುಡುಗಿಯ ನಡುವೆ ಬರಿದೇ ಸ್ನೇಹ ಸಾಧ್ಯವಿದೆ ಎಂಬುದನ್ನು ಸಾಧಿಸ ಹೊರಟಿದ್ದೇನೋ ನಿಜ... ಆದರೆ ನಮ್ಮ ಕಥೆಯೂ ಒಂದೇ ತರಹದ ಕೊನೆ ತಲುಪಿತಲ್ಲ ಎಂಬ ಬೇಸರವಂತೂ ಖಂಡಿತಾ ಇಲ್ಲಾ.."

    rofl.. I don't know what to say :) @ ಗುಂಡ, ಎಂತೋ ಹೇಳ್ತಿದ್ದ ಅವತ್ತು.. ಈಗ ಮರ್ತೋಜು.. :) (Take it easy, just kidding.. )

    ReplyDelete
    Replies
    1. ಯೇ ಸುಮ್ಮಂಗಿರ ಮಾಣಿ ಸಾಕು.... ಗುಂಡ ಎಂತು ಹೇಳಿದ್ನಿಲ್ಲೆ ಪಾಪ.... :P

      Delete
  15. ಕಾವ್ಯಾ, ಬಾಳು ಅಮರಕಾವ್ಯವಾಗಲಿ. ಶುಭಾಶಯಗಳು. ಮೊದಲು ಬರದದ್ದಕ್ಕಿಂತ ತುಂಬಾ ಚಂದ ಬರದ್ದೆ.. ಒಳ್ಳೆದಾಗಲಿ.

    ತುಂಬು ಹಾರೈಕೆಗಳು.

    ಇತೀ,
    ಕಿಣ್ಣಣ್ಣ !

    ReplyDelete
    Replies
    1. ತುಂಬಾ ತುಂಬಾ ಧನ್ಯವಾದ ಕಿಣ್ಣಣ್ಣ... ಓದಿ ಕಮೆಂಟಿಸಿದ್ದಕ್ಕುವ ಮತ್ತೆ ನಿನ್ನ ಶುಭ ಹಾರೈಕೆಗುವ....

      Delete
  16. ಖುಷಿ ಆತು ಓದಿ.. ನಿಂಗಳ ಸ್ನೇಹ-ಪ್ರೇಮ ಸದಾ ಹಿಂಗೇ ಇರ್ಲಿ :)

    ReplyDelete
    Replies
    1. ಥ್ಯಾಂಕ್ ಯು ಹರಿ.... :) ನಂಗ್ಳ ಸ್ನೇಹ-ಪ್ರೇಮದ ಮಧ್ಯ ನಿಂಗಳ ಆಶೀರ್ವಾದ, ಹಾರೈಕೆ ಸದಾ ಹಿಂಗೆ ಇರ್ಲಿ... :)

      Delete
  17. ಕಾವ್ಯಾ ಪುಟ್ಟಿ ತುಂಬಾ ಸಂತೋಷವಾಗ್ತಿದೆ.. ನೀನು (ತಂಗಿಯೆನ್ನುವ ಸಲುಗೆಯಲ್ಲಿ ಏಕವಚನ ಏಕದಂತನ ನನಗೆ ಸಪೋರ್ಟ್ ಇದೆ ಅಂದ್ಕೋತೀನಿ)ನಿನ್ನ ವಿನಾಯಕನ ಜೊತೆ ನೂರ್ಕಾಲ ಆಯುರಾರೋಗ್ಯ ಸಂತೋಷ ಸಮೃದ್ಧಿಯ ಜೀವನ ನಡೆಸು ಎಂದು ತುಂಬು ಮನದ ಹಾರೈಕೆ ಆಶೀರ್ವಾದ ನನ್ನದು.

    ReplyDelete
    Replies
    1. ತುಂಬು ಮನದ ಧನ್ಯವಾದಗಳು ಅಜಾದಣ್ಣ... :) (ಏಕದಂತ ಅದಕ್ಕೆಲ್ಲ ಏನೂ ಹೇಳಲ್ಲ... ;) ) ಈ ಆಶೀರ್ವಾದ, ಹಾರೈಕೆ ತಂಗಿಯ ಮೇಲೆ ಹೀಗೆಯೇ ಇದ್ದಲ್ಲಿ ನಾವು ನೂರ್ಕಾಲ ಸುಖವಾಗಿಯೇ ಇರುತ್ತೇವೆ... :) :)

      Delete
  18. suuuuuuuuuuuuper sose kuse..:) keep it up

    ReplyDelete