ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಮುತ್ತುಗರೆದವನೆಬ್ಬಿಸುವಾಗ, ಮತ್ತಿನ
ಮುಗುಳುನಗೆಯ ಸುಂದರಾಂಗನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಮುಸ್ಸಂಜೆಯ ದೇವರ ನಾಮದೊಳಿರೆ,
ಹಿಂದಿನಿಂದಪ್ಪಿದ ಮುದ್ದು ಕೃಷ್ಣನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಹಸಿದೊಡಲಿಗುಣಬಡಿಸುವಾಗಲೊಮ್ಮೆ,
ಮೆಚ್ಚುಗೆಯಿಂದ ನೋಡುವ ಪತಿ ದೇವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಸಿಟ್ಟಿನಲಿ ರಚ್ಚೆ ಹಿಡಿದವಳ, ಪ್ರೀತಿಯಿಂ-
ದೋಲೈಸುವ ಚಿಗುರು ಬೆರಳವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಸಹಚಾರಿಣಿಯ ಹುಡುಗಾಟವ ಸಹಿಸಿ,
ಗದರದೇ ನಗುವ ಮುಗ್ಧನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಮಡಿಲಲ್ಲಿ ಮಗುವಂತೆ ಮಲಗಿ, ನಿದ್ದೆಯಲಿ
ಕನವರಿಸಿ ಮುದ್ದಿಸುವ ಸುಕುಮಾರನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಬದುಕಿನ ಸೌಧ ಕಟ್ಟಲು, ಪ್ರೀತಿಯ
ನೌಕೆ ಹೊತ್ತು ತಂದ ಸರದಾರನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಕಾವ್ಯಾ :)
.jpg)

:-* :) :) :) :) :-*
ReplyDeleteನಗೂ ನಗೂ ನಗೂ ನಗೂ... :) ;)
Deleteತುಂಬಾ ಚೆನ್ನಾಗಿ ಮೂಡಿ ಬಂದಿದೆ
ReplyDelete೨-೩ ಸಾಲುಗಳು ಮನಸ್ಸಿಗೆ ಹತ್ತಿರವಾಗುತ್ತವೆ
ನನಗೂ ಬರೆಯಬೇಕೆಂಬ ಆಸೆ ಆದರೆ ನಿಮ್ಮ ಕಲೆ ನನಗಿಲ್ಲ
ಶುಭವಾಗಲಿ
ಮುಂದುವರೆಸಿ
ತುಂಬಾ ಧನ್ಯವಾದ ಸರ್.... :) ನಿಮಗೆ ಕಲೆ ಇಲ್ಲಾ ಅಂದವರ್ಯಾರು...?! ನಿಮ್ಮ ಕಥೆಗಳನ್ನು ನಾನೂ ಓದಿದ್ದೆನಲ್ಲ... start writing after retirement again sir... :)
Deleteಮುತ್ತುಗರೆದವನೆಬ್ಬಿಸುವಾಗ, ಮತ್ತಿನ
ReplyDeleteಮುಗುಳುನಗೆಯ ಸುಂದರಾಂಗನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಅದ್ಭುತ ಸಾಲುಗಳು.......
ಮದ್ವೆ ಆದ ಹೊಸತರಲ್ಲಿ ಏನೇನೋ ಆಗಿ ಏನೂ ಹೊಳೆಯದೇ ಹೋಗಿದ್ದೆಲ್ಲಾ ಒಮ್ಮೆಲೇ
ಲೇಖನಿಯ ತುದಿಗೆ ಸರಾಗ ಸಾಗರವಾಗಿ ಹರಿದಂತಿದೆ....
ತುಂಬಾ ಚನ್ನಾಗಿದ್ದು...... ತುಂಬಾ.....
ಹಾ ಹಾ ಹಾ .... exactly.... :) ಅನುಭವದ ಮಾತಲ್ದ ಅದ್ಕೆ ಸರಿನೇ ಇರ್ತು... ;) ಧನ್ಯವಾದ ತುಂಬಾ... ತುಂಬಾ.... :) :)
ReplyDeleteಚೆಂದ ಇದ್ದು .. ಸಿನಿಮಾ ಹಾಡೊಂದರ ಟ್ಯೂನ್ ನೆನ್ಪಾತು :-)
ReplyDeleteಧನ್ಯವಾದ.... ಯಾವ್ದು...?
ReplyDeleteಅನುಭವದ ಮೂಸೆ ಇಂದ ಇನ್ನಷ್ಟು romantic ಕವನಗಳು ಬರಲಿ.
ReplyDeleteತುಂಬಾ ಚನಾಗಿದ್ದು, ಮದ್ವೆ ಆಗದ ಹುಡ್ರಿಗೆ ಹೊಟ್ಟೆಕಿಚ್ಚು ಬರಿಸುವಷ್ಟು ;)
ಹಾ ಹಾ ಹಾ ಹಾ.... ಧನ್ಯವಾದ ಗುಂಡ... ಹೊಟ್ಟೆಕಿಚ್ ಪಡಡಾ....! ಇನ್ನು ಬರ್ಯಕ್ಕೆ ಬತ್ತಿಲ್ಲೆ ನಂಗೆ ಕಡಿಗೆ... ;):P
ReplyDeleteHey.. Super..
ReplyDeleteThanks... :) :)
ReplyDeleteನಿ ಸುಮ್ಮನೆ ಮೆಚ್ಚಿಕೊಂಡಿಲ್ಲಾ ನಿನ್ನ ಮನಸ್ಸು,ಹೃದಯ,ಭಾವನೆಗಳು,ಕೊಟ್ಟು ಮೆಚ್ಚಿಕೊಂಡಿದ್ದಿಯ....
ReplyDeleteಮುಸ್ಸಂಜೆಯ ದೇವರ ನಾಮದೊಳಿರೆ,
ReplyDeleteಹಿಂದಿನಿಂದಪ್ಪಿದ ಮುದ್ದು ಕೃಷ್ಣನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ,,,,,,
ಚೆನ್ನಾಗಿ ಮೂಡಿ ಬಂದಿದೆ.............
thanks :)
DeleteThis comment has been removed by the author.
ReplyDeleteGood one.. :)
ReplyDelete