Thursday, February 14, 2013


ಎನ್ನ ಮನದೊಡೆಯ ನೀನು....
   ನೀ ಬಲ್ಲದಿರೆಯಾ ಮನದಾಳವನ್ನು...
ನಿನಗೆ ತಿಳಿಯದುದೆನ್ನೊಳೇನಿದೆ ಗೆಳೆಯಾ ...
   ಮತ್ತೊಮ್ಮೆ ಹೇಳುತಿರುವೆ ನೀನೆನ್ನ ಇನಿಯ...

ಪ್ರತಿ ಜನ್ಮದಲೂ ನೀನೆನ್ನ ವರಿಸು...
   ಪ್ರೀತಿಯ ಸುಧೆಯ ಹೀಗೆಯೇ ಹರಿಸು...
ಪ್ರತಿ ದಿನ ಎನ್ನ ಹೀಗೆಯೇ ರಮಿಸು...
   ಮಾಡಿದ ತಪ್ಪಿಗೆಲ್ಲ ನೀ ಎನ್ನ ಕ್ಷಮಿಸು...

ಮುತ್ತುಗರೆದೆಬ್ಬಿಸಿ ನೀ, ಎನ್ನ ಮತ್ತೇರಿಸಿ...
   ಮತ್ಯಾಕೆ ಓಡುತಿಹೆ ನೀ, ಮನವ ಹೀಗೆ ಕಾಡಿಸಿ...
ನೋಡಿಲ್ಲಿ, ಹಾಗೆಯೇ ಇದೆ ನಿನ್ನಧರದ ಬಿಸಿ....
   ಎಲ್ಲಿ ಮರೆಯಾದೆ ನೀ, ನನ್ನ ಗಲ್ಲವ ರಂಗೇರಿಸಿ...

ಕಾಡುವೆಯೇಕೆ ಹೀಗೆ ಕನಸಲೂ,
                ಮನಸಲೂ, ನನಸಲೂ....
ಕಾದಿರುವೆ ನಾ, ನಿನ್ನ ಮೋಡಿಗೊಳಗಾಗಲು....
    ಓಡಿ ಬಾ ನೀ, ಎನ್ನ ಮುದ್ದಿಸಲು.... 

ನೀ ಎನ್ನ ಪ್ರಿಯತಮನೆನ್ನಲು,
   ಎನಗೀ ದಿನವೇ ಬೇಕಿಲ್ಲ....
ಪ್ರೀತಿಯ ಸಣ್ಣ ನಿವೇದನೆಗೆ 
   ಇದೊಂದು ನೆಪ ಸಾಕಲ್ಲ... 


10 comments:

  1. Good one kavya... :) ಇಂಥಾ ಪ್ರೀತಿ ಮಾತು ಕೇಳಿದ ಇನಿಯ ಬರದೆ ಹೋಗೋದು ಎಲ್ಲಿಗೆ ಹೇಳು ?? ಹಿಂಗೆ ಇನ್ನಷ್ಟು ಬರಲಿ ನಿನ್ನ ಪ್ರೇಮ ನಿವೇದನೆ.. ಅನುದಿನವು ನಡೆಯುತ್ತಿರಲಿ ಪ್ರೇಮಾರಾಧನೆ ...

    ReplyDelete
    Replies
    1. ಧನ್ಯವಾದಗಳು ಅತ್ಗೆ... :) ಜೊತೆಗಾರ ಬಳಿ ಇರಲು ಅನುದಿನವೂ ಪ್ರೇಮಾರಾಧನೆಯೇ... ;)

      Delete
  2. ... ಕಾವ್ಯಾ....
    ಇಷ್ಟು ದಿನಕ್ಕೊಂದು ಕಾವ್ಯವರಳೀತೇ.....
    ನೀ ಹೇಳಿದಂತೆಯೇ ಒಂದು ನೆಪ ಬೇಕಿತ್ತೇ....

    ಪ್ರೀತಿಯ ಗಾಢತೆ ಅರ್ಥ ಆಗ್ವಂಗಿದ್ದು...

    ಜೊತೆಗಾರ ಮಾಡಿದ ಮೋಡಿ....
    ಜೊತೆಗಾರನಿಗೆ ಬರೆದ ಹಾಡು.. ಎರಡೂ ಚನ್ನಾಗಿದೆ....

    ಪ್ರೀತಿಯ ರಂಗು ಮೂಡಿದೆ....

    ಚಂದ ಚಂದ.........



    ReplyDelete
    Replies
    1. ಕಾವ್ಯ ಅರಳಲು ಪ್ರೀತಿಯ ಲಹರಿ ಬೇಕು ಅಲ್ವ ರಾಘು... ಜೊತೆಗಾರ ಮಾಡಿದ ಮೋಡಿ ಕಾವ್ಯದ ರೂಪ ಪಡ್ಯಲೆ ಒಂದು ನೆಪ ಬೇಕು ಅಷ್ಟೇ.... :P :)

      Delete
  3. ಪ್ರೀತಿಯ ಸುಂದರ ಸಾಲುಗಳು...ಮನದಾಳದಲ್ಲಿ ಜೊತೆಗಿದ್ದ ಮನದೊಡೆಯನು ಈ ನಿನ್ನ ಪ್ರೀತಿಗೆ ಸೋಲದೆ ಇರಲಾರನು

    ReplyDelete
    Replies
    1. ಹ ಹ ಹ... ಧನ್ಯವಾದಗಳು... ನನ್ನ ಬ್ಲಾಗ್ ಗೆ ಸ್ವಾಗತ :)

      Delete
  4. ಇಷ್ಟವಾಯ್ತೀ ಪ್ರೇಮದ ಪರಿ :)

    ReplyDelete
  5. ಧನ್ಯವಾದ... :) ಸ್ವಾಗತ ನನ್ನ ಭಾವನಾ ಲೋಕಕ್ಕೆ... :)

    ReplyDelete
  6. Tumba ista athu !! Tumba chennagiddu...

    ReplyDelete