(ಭಾಗ ೨)
ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲೇಬೇಕಲ್ಲ...!
ಮಾನಸಿಕ ತುಮುಲಗಳಿಂದ ಕೂಡಿದ ಮನಸ್ಸು ಎಷ್ಟು ದಿನ ತಾನೇ ಸ್ಫೋಟಗೊಳ್ಳದೆ ಇರಲು ಸಾಧ್ಯ.... ಆ ದಿನ ಶೀಘ್ರದಲ್ಲೇ ಬಂತು. ಮನಸ್ಸಿನ ಭಾವನೆಗಳು ಕಟ್ಟೊಡೆದ ನದಿಯ ಪ್ರವಾಹದಂತೆ ಹರಿಯಲಾರಂಭಿಸಿತು. ಭಾವನೆಗಳು ಮಾತಾದವು. ಮನಸ್ಸಿನಲ್ಲಿ ಅರಿವಿಲ್ಲದೇ ಮೊಳೆತ ಪ್ರೀತಿ ಬೆಳೆದು ಗಟ್ಟಿಯಾಗಿ ಬೇರೂರಿಯೇ ಬಿಟ್ಟಿತ್ತು. ಅಂತರಂಗದಳಲು ಬಹಿರಂಗವಾಗತೊಡಗಿತು.
ಇಬ್ಬರೂ ಕುಳಿತು ಚರ್ಚಿಸಿದರು. ಅದೆಲ್ಲಿ ಪ್ರೀತಿ ಮೂಡಿತು... ಅದೇಕೆ ನಮ್ಮ ಮನ ತಿರುಗಿತು.. ಅದು ಹೇಗೆ ಸ್ನೇಹ ಪ್ರೀತಿಯಾಯಿತು... ಇದು ಕೇವಲ ಸ್ನೇಹದ ಪ್ರೀತಿಯೋ ಅಥವಾ ಪ್ರೇಮದ ಪ್ರೀತಿಯೋ...! ಮನ ಗೊಂದಲದ ಗೂಡಾಯಿತು. ಮುಂದಿನ ದಾರಿ ಕಾಣದಾಯಿತು. ಹುಡುಗ-ಹುಡುಗಿಯ ಮಧ್ಯ ಸ್ನೇಹ, ಮಮತೆ, ಅವಲಂಬನೆ, ಪರಸ್ಪರ ಕಾಳಜಿ ಗಾಢವಾದಂತೆ ಅಲ್ಲಿ ಸ್ನೇಹವನ್ನು ಮಾತ್ರವೇ ಉಳಿಸಿಕೊಳ್ಳಲು ಅಸಾಧ್ಯ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಯಿತು. ಗಾಢ ಸ್ನೇಹದಲ್ಲಿ ಪ್ರೀತಿಯ ಅಂಕುರ ಸಹಜವೆಂಬುದು ಇಬ್ಬರಿಗೂ ಮನವರಿಕೆಯಾಯಿತು.
ಮುಂದೇನು ಎಂದು ಬಹುವಾಗಿ ಯೋಚಿಸಿದರು. ಮನೆಯವರನ್ನು ಒಪ್ಪಿಸಲು ಸಾಧ್ಯವಿಲ್ಲ ತಾವು ಬೇರೆಯಾಗುವುದೇ ಸರಿ ಎಂದುಕೊಂಡರು. ಸುಮ್ಮನೆ ಮಾನಸಿಕ ತುಮುಲಗಳಿಗೆ ಒತ್ತು ನೀಡಿದರೆ ಅವು ಬಹು ಬೇಗ ಸ್ಫೋಟಗೊಳ್ಳುತ್ತವೆ. ಗೊಂದಲದ ಗೂಡಾದ ಮನಸ್ಸಿಗೆ ಮೊದಲಿನ ಮಾತು, ನಗು, ಹಾಸ್ಯ ಅಸಾಧ್ಯವೆನಿಸತೊಡಗಿತು. ಇಬ್ಬರಲ್ಲೂ ಮೌನವೇ ಮಾತಾಯಿತು. ಸ್ನೇಹದಲ್ಲಿದ್ದ ಖುಷಿ ಪ್ರೀತಿಯಲ್ಲಿ ಸಿಗುತ್ತಿಲ್ಲ ಎಂದುಕೊಂಡರು. ಕೊನೆಗೆ ಇಬ್ಬರೂ ಮೊದಲಿನಂತಾಗೋಣ ಎಂದು ಸಂಕಲ್ಪಿಸಿದರು.... ಆದರೆ ನಾವು ಅಂದುಕೊಂಡಂತೆಲ್ಲ ಮನಸ್ಸು ಕೇಳುತ್ತದೆಯೇ...?! ಬರ ಬರುತ್ತಾ ಇಬ್ಬರಿಗೂ ತಮ್ಮ ನಗು, ಮಾತು ಕೃತಕವೆನಿಸತೊಡಗಿತು. ಪ್ರೀತಿಯನ್ನು ಬಿಡುವುದು ಅಸಾಧ್ಯವೆನಿಸತೊಡಗಿತು. ದೂರಾಗುತ್ತಿದ್ದೇವೆ ಎನ್ನುತ್ತಲೇ ಮನಸ್ಸು ಮತ್ತಷ್ಟು ಹತ್ತಿರವಾಗುತ್ತಿತ್ತು....
ಅನುರಾಗವೆಂಬುದು ಎಲ್ಲಿ, ಯಾವಾಗ, ಯಾರಲ್ಲಿ, ಹೇಗೆ ಮೂಡುತ್ತದೆ ಎಂದು ತಿಳಿಯುವುದು ಅಸಾಧ್ಯ. ಎಷ್ಟೋ ಪ್ರೇಮ ಅದೆಷ್ಟೋ ರೀತಿಯಲ್ಲಿ ಕೊನೆಯಾಗುತ್ತದೆ. ನಾವೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು, ಹಣೆಬರಹವನ್ನು ಬಲ್ಲವರಾರು... ಎಂದು ನಿರ್ಧರಿಸಿ, ಊರಿಗೆ ಹೋದಾಗ ಅವನು ಮನೆಯಲ್ಲಿ ಹೇಳಿಯೂ ಬಿಟ್ಟನು... ಇತ್ತ ಏನಾಗುತ್ತದೋ ಎಂದು ಉಸಿರು ಬಿಗಿ ಹಿಡಿದು ಕಾದಿದ್ದ ಅವಳಿಗೆ ಸಿಹಿ ಸುದ್ದಿ ಕಾದಿತ್ತು. ಅವಳು ಖುಷಿಯಿಂದ ಕುಣಿದೇ ಬಿಟ್ಟಿದ್ದಳು... ದಿನಗಳೆದಂತೆ ಅವಳೂ ಕೂಡ ಮನೆಯಲ್ಲಿ ಒಪ್ಪಿಸುವಲ್ಲಿ ಯಶಸ್ವಿಯಾದಳು..
ಅಂತೂ ಸ್ನೇಹ ಪ್ರೀತಿಯಾಗಿ ಮುಂದುವರೆದು ನಮ್ಮ ಕಥಾನಾಯಕನಿಗೆ ಈಗ ಅವಳಿ - ಜವಳಿ ಮಕ್ಕಳು...
ಕಾವ್ಯಾ :)


ಜಿನ್ದಗಿನೆ ಹಂಗೆ ., ಸಿಕ್ಕಿ ಸಿಗದಿರೋ ಹುಡಗಿಯರು., ಅತ್ತ ಪ್ರೀತಿಯ ಹೇಳಲಾಗದೆ ಇತ್ತ ಸ್ನೇಹಿತರಾಗಿರಲಾರದೆ .,ಅವಳ ಕಳೆದು ಕೊಳ್ಳುವ ಭಯದಿ ನಾವೇ ಕಳೆದು ಹೋಗುವ ಹುಚ್ಚು ಪ್ರೋಸೆಸ್ಸ್.
ReplyDeleteಪ್ರತಿಕ್ರಿಯೆಗೆ ಧನ್ಯವಾದ ಗುಂಡ.. ನೀ ಹೇಳಿದ್ದು ನಿಜ.. ಅದಕ್ಕೇ ಸ್ನೇಹ - ಪ್ರೀತಿ ಎರಡನ್ನೂ ಉಳಿಸಿದ್ದೇನೆ... :)
ReplyDeleteಹೂಂ....
ReplyDeleteಪ್ರೀತಿಯೆನ್ನುವುದೇ ಹಾಗೆ....... ಹುಟ್ಟುವಾಗ ಬೆವರಿನಂತೆ.... ಗೊತ್ತೇ ಆಗುವುದಿಲ್ಲ........ ಾಮೇಲೆ ಎಷ್ಟೇ ವರೆಸಿದರೂ ಜಿಗುಟು ಹೋಗುವುದಿಲ್ಲ....
ಬೆವರಿನ ಹಾಗೆ ಅಂತ ಹೋಲಿಕೆ ಕೊಟ್ಟಿದ್ದಕ್ಕೆ ವಿಷಾದವಿದೆ.
ಮರೆಯಬೇಕೆಂದುಕೊಳ್ಳುವವರ ಪಾಲಿಗೆ ಹಾಗೆ......
ಹುಟ್ಟೋಕೆ ಕಾರಣಾನೇ ಬೆಕಿಲ್ಲ..... ಶಾಶ್ವತವಾಗಿಸಿಕೊಳ್ಳೊಕೆ ಸೆಣಸಬೇಕು.....
ಚೊಲೋ ಬರದ್ದೆ. ಸರಳವಾಗಿ ಅಲ್ಲಾ ತುಂಬಾ ಸರಳವಾಗಿದ್ದು ಲೇಖನ....
keep it up......
ಚಂದದ ಪ್ರತಿಕ್ರಿಯೆ.. ನಿಜ ನೀ ಹೇಳಿದ್ದು.... ಒಳ್ಳೆಯ ಹೋಲಿಕೆ ಕೂಡ....
ReplyDeleteಬೆವರು ಹೆಂಗೆ ವರೆಸಿಕೊಂಡಷ್ಟೂ ಜಾಸ್ತಿ ಆದಂಗೆ ಅನ್ನಿಸ್ತ ಹಂಗೆ ಪ್ರೀತಿನೂ ಮರೆಯಬೇಕು ಎಂದಷ್ಟು ಸುಪ್ತ ಮನಸ್ಸಿನಲ್ಲಿ ಜಾಸ್ತಿನೆ ಆಗ್ತು.. ಮರೆತು ಮರೆತರೂ ನೆನಪು ಮತ್ತೆ ಹಳೆ ನೆನಪನ್ನ ನೆನಪು ಮಾಡ್ತು...!
ಧನ್ಯವಾದ ಪ್ರೋತ್ಸಾಹಕ್ಕೆ......... :)
kate bardavkuva "avali javali "makkal agli ennuvudu nann haraike....:)
ReplyDeleteohho.. thank you shubha.... :) :)
ReplyDeleteಕಥೆಯ ಎಂಡಿಂಗ್ ಚನಗಾತು :D
ReplyDelete:) :) :) :)
ReplyDelete