Friday, September 30, 2011


 ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 

***********


  ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..
     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

**********

ಕಾವ್ಯಾ 

6 comments:

  1. ಸುಂದರವಾದ ಎರಡು ಕಥೆಗಳು......
    ಚಿಕ್ಕವಾಗಿ ಮತ್ತೆ ಚೊಕ್ಕವಾಗಿ.....

    ಇದನ್ನು ಓದಿದಾಗ ಮಂಗಳದಲ್ಲಿ ಬರುವ ಕಾರ್ಡಿನಲ್ಲಿ ಕಥೆ ನೆನಪಾತು.....

    ಚಂದ ಬರೀದೆ.......

    ಮುಂದುವರೆಯಲಿ.........

    ReplyDelete
  2. ಧನ್ಯವಾದ ರಾಘವ... ಹಮ್ ಅದೇ ಕಾರ್ಡಿನಲ್ಲಿ ಕಥೆಗಳೇ ಸ್ಫೂರ್ತಿ...
    ಹೀಗೆ ಓದ್ತಾ ಇರು... ಪ್ರೋತ್ಸಾಹ ಇರಲಿ..

    ReplyDelete
  3. ದೇವರು ಕರುಣಾಮಯಿ ಪ್ರೀತಿಗೆ ಜೈ....
    ನಿಮ್ಮ ಪ್ರೀತಿಯ ನಾಗು ನಿಮ್ಮ ತುಟಿ ಮೇಲಿನ ನಗು

    ReplyDelete
  4. ಚಂದ ಇದ್ದು:):)..ಕತೆಗಳ ಭಾವಸಂವೇದನೆ ಇನ್ನಷ್ಟು ತೀಕ್ಷ್ಣ ಮತ್ತು ವಿಸ್ತಾರವಾಗಲಿ :)

    ReplyDelete
  5. ಮೊದಲ ಪ್ರಸಂಗದಲ್ಲಿ ಅವನ ಸ್ವಾರ್ಥತೆ ಮತ್ತು ಆಸ್ತಿಯ ಆಸೆ ಚೆನ್ನಾಗಿ ಮೂಡಿಬಂದಿದೆ.

    ಎರಡನೇ ಪ್ರಸಂಗದಲ್ಲಿ, ನೆಚ್ಚಿದ ಇಬ್ಬರೂ ಒಬ್ಬರನೊಬ್ಬರು ’ನೋಡುವ’ ಶಾಸ್ತ್ರ ಇದೆಯಲ್ಲ ಅದರ ಮಜವೇ ಬೇರೆ. ಸೂಪರ್ರು...

    ಮೇಡಂ, ಕೆಲವೇ ಸಾಲುಗಳಲ್ಲಿ ಬ್ಹತ್ ತತ್ವವನ್ನು ನ್ಯಾನೋ ಕಥೆಯಲ್ಲಿ ಚಿತ್ರಿಸುವ ಕಲೆ ನಿಮಗೆ ಸಿದ್ಧಿಸಿದೆ. ಭೇಷ್!

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  6. ನಾಗರಾಜ್: ಧನ್ಯವಾದಗಳು..

    ಶ್ರೀಪಾದು: ಅದು ನ್ಯಾನೋ ಕಥೆ ಆಗಿದ್ದಕ್ಕೆ ಭಾವನೆಗಳನ್ನ ಚಿಕ್ಕದಾಗಿ ನಿವೇದನೆ ಮಾಡಿದ್ದಿ.. ದೊಡ್ಡ ಕಥೆ ಬರ್ಯಕರೆ ಖಂಡಿತ ನೀ ಹೇಳ್ದಂಗೆ ಮಾಡ್ತಿ... ಧನ್ಯವಾದ... :)

    ಬದರಿ ಸರ್: ತುಂಬಾ ಧನ್ಯವಾದಗಳು ಪ್ರತಿಕ್ರಿಯೆಗೆ.... ನೆಚ್ಚಿದ ಇಬ್ಬರೂ ನೋಡುವ ಶಸ್ತ್ರ ತಮ್ಮ ಅನುಭವವೇ...?? ;):)
    ಖಂಡಿತ ತಮ್ಮ ಬ್ಲಾಗ್ ನೋಡುತ್ತೇನೆ... ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ....

    ReplyDelete