(ಮೇ ತಿಂಗಳಿನಲ್ಲಿ ಮಹಾಬಲಗಿರಿ ಭಟ್ಟರ ಕರಾವಳಿ ರೈಲು ಬ್ಲಾಗಿನಲ್ಲಿ (http://karavalirail.blogspot.com) ಈ ಚಿತ್ರಕ್ಕೆ ಹಲವಾರು ಕವನಗಳು ಬಂದವು... ಮೂಲ ಚಿತ್ರ ಕವಿ ಹೃದಯಿ ಪ್ರವೀಣ್ ಭಟ್ ಸಂಪ (http://nenapinasalu.blogspot.com )ಅವರದ್ದು. ಈ ಚಿತ್ರಕ್ಕೆ ನನ್ನದೊಂದು ಕವನ....)
ಒಂಟಿಯಾಗಿ ಕುಳಿತ ಆ ಮುದಿಯ ಜೀವ....
ಬಾಯ್ದೆರೆದು ನೋಡುತಿದೆ ಬಿಸಿಲ ಕಾವ...
ಪ್ರಾಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ....
ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ...
ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ...
ಸಂಸಾರ ತೂಗಿಸುವ ಯೋಚನೆಯೊಂದೇ ತಲೆಯಲಿ...
ದುಡಿದು ಬಂದರೆ ಹಸಿವೆಂದು ಬಾಯ್ಬಿಡುವ ಮಕ್ಕಳು...
ಕಾಯಿಸಿದ ಒಂದಿಷ್ಟು ಅಂಬಲಿಯ, ಒಡಲ ಹಸಿವಿಲ್ಲದೆ ಬಡಿಸಿದ ಕೈಗಳು...
ಪತಿಯ ಊಟವ ಖುಷಿಯಲಿ ಕಂಡು, ನೀರು ಕುಡಿದು ನಿದ್ರಿಸಿದ್ದ ಕಂಗಳು....
ಕಷ್ಟ ಪಡುತ್ತ ಮಕ್ಕಳನು ದಡ ಹತ್ತಿಸುವ ಹಾದಿಯಲಿ...
ಪತಿಯ ಅಗಲಿಕೆಯ ನೋವನು ಮರೆಯುತ....
ಮಕ್ಕಳೊದಗಿಸುವ ಮುಂದಿನ ನೆಮ್ಮದಿಯ ಹಾದಿಯತ್ತ ದೃಷ್ಟಿ ಹರಿಸುತ....
ಕಂಡ ಕನಸುಗಳು ನನಸಾಗದಾದಾಗ...
ಮಕ್ಕಳು ಮುದಿ ಜೀವವ ತೊರೆದು ಹೋದಾಗ....
ನಮಗೆ ನಾವೇ... ಗೋಡೆಗೆ ಮಣ್ಣೇ ಎಂಬ ಭಾವದಿ....
ಬೊಚ್ಚು ಬಾಯಿ, ಗುಳಿ ಬಿದ್ದ ಕಂಗಳಿಂದ....
'ನಾ ಬೆಳೆಸಿದ ಹುಡುಗ ನೀನಾದರೂ
ನನ್ನ ನೋಡಾಕೆ ಬಂದೆಯಾ ಮಗಾ...'
ಎಂಬ ಸಂತಸವ ಮುಖದಲಿ ಹೊತ್ತ ನಾಗಿ.....
ಇವಳು ನನ್ನ ಬೆಳವಣಿಗೆಯಲ್ಲಿ ಭಾಗಿ....
ಕಾವ್ಯಾ :)
ondu photo noodi avara jivanadalli nadediddu ella pakkada maneyavara tara helbittiddira.....
ReplyDeletekalpane chenagide..
very nice..
dhanyavaadagalu Tharun... :)
ReplyDeleteಅದೊಂದು ಕಾಲಘಟ್ಟವೇ ಹಾಗೆ....
ReplyDeleteಅನಿಸಿದ್ದನ್ನು ಮಾಡುವ ಹಂಗಿಲ್ಲ.....
ಮಾಡಲಿಕ್ಕೆ ಸುಕ್ಕು ದೇಹದಲ್ಲಿ ತ್ರಾಣವೂ ಇರೋದಿಲ್ಲ.
ಮೊದಲಿನದೆಲ್ಲಾ ನೆನೆ ನೆನೆದೇ
ತಳ್ಳಿ ಬಿಡಬೇಕು ದಿನವ...
ಖುಷಿಯೋ ಹಸಿಯೋ..... ಬೀಳುವ
ಮರ ತಾನೇ ಅನ್ನೋ ಭಾವ....
ಚನ್ನಾಗ್ ಬರೀದೆ ಹಾಂ......
ಕೈಲಾಗದ ಕಾಲದಲ್ಲಿ ಬಿಟ್ಟು ಹೋಗುತ್ತಾರೆ ಮಕ್ಕಳು...
ReplyDeleteನೊಂದ ಜೀವಕೆ ಮತ್ತೆ ನೋವನ್ನೇ ಕೊಡಲು...
ಹಳೆಯದ ನೆನಪಲ್ಲದೆ ಇನ್ನೇನು ಮಾಡೀತು ಆ ಜೀವ,
ಈಗಿನ ಬದುಕ ಸಾಗಿಸಲು....?!
ಧನ್ಯವಾದಗಳು ರಾಘವ... :)
ಅಸಹಾಯಕತೆ, ಅಳಲು, ಮನದೊಳಗಿನ ತುಮುಲ ಚೆನ್ನಾಗಿ ವ್ಯಕ್ತವಾಗಿದೆ ಮೇಡಂ...
ReplyDelete'ನಾ ಬೆಳೆಸಿದ ಹುಡುಗ ನೀನಾದರೂ
ನನ್ನ ನೋಡಾಕೆ ಬಂದೆಯಾ ಮಗಾ...' ಈ ಸಾಲುಗಳು
ಮನ ತಟ್ಟುತ್ತದೆ....
ಧನ್ಯವಾದಗಳು ಮೌನರಾಗ... ಹಾಗೆಯೇ ನನ್ನ ಪುಟಗಳಿಗೆ ಸ್ವಾಗತ ನಿಮಗೆ.... :)
ReplyDeleteಆ ವಯಸ್ಸಿಗೆ ಆ ಸ್ಥಿತಿಯಲ್ಲಿ ಅಸಹಾಯಕರಲ್ಲದೆ ಇನ್ನೇನು ತಾನೇ ಸಾಧ್ಯ ಅಲ್ಲವೇ...?!
ಕಾವ್ಯ..ಮುದುಕಿಯ ಮನದಭಾವಕೆ ಆಸೆ-ನಿರಾಸೆ-ಆಕಾಂಕ್ಷೆಗಳ ಲೇಪವಿಟ್ಟ ಕವನ ಚನ್ನಾಗಿ ಮೂಡಿ ಬಂದಿದೆ...ಬಹುಶಃ ಈ ಚಿತ್ರಕ್ಕೆ ನಾನೂ ನನ್ನ ಭಾವಲಹರಿ ಹರಿಯಬಿಟ್ಟಿದ್ದೆನೋ ಏನೋ ಎನಿಸುತ್ತಿದೆ...
ReplyDeleteಧನ್ಯವಾದಗಳು ಆಜಾದ್ ಸರ್... ಈ ಕವನವನ್ನು ನಾನು ಅವರೆಲ್ಲರೊಟ್ಟಿಗೇ ಬರೆದಿದ್ದೆ ಭಟ್ಟರು ಬ್ಯುಸಿ ಆದ್ದರಿಂದ ಅವರ ಬ್ಲಾಗಿನಲ್ಲಿ ಪ್ರಕಟಿಸಲಾಗಲಿಲ್ಲ... ಈಗಲೂ ನಿಮ್ಮ ಭಾವ ಲಹರಿಯನ್ನು ಹರಿ ಬಿಡಿ ಸರ್.... :) :)
ReplyDeleteolle saalugalu......good
ReplyDeletethank u... :) blog ge swaagata... :)
ReplyDeleteಸುಂದರ ಕಾವ್ಯ !
ReplyDeleteಅದರಲ್ಲೂ ನಮಗೆ ನಾವೇ ಗೋಡೆಗೆ ಮಣ್ಣೇ ಅನ್ನುವ ಸಾಲು ತುಂಬ ಚೆನ್ನ .
ಹಾ ಹಾ.. ಧನ್ಯವಾದ ಕಿರ್ಭ.. :)
ReplyDeleteಹಮ್ ಜೀವನಾನೆ ಅಷ್ಟು.... ನಾವು ಸಾಯವು ಸ್ವರ್ಗ ಕಾಣವು...!
ಆ ಹತಭಾಗ್ಯ ಮುದಿಜೀವವೇ ಕ್ಷಮಿಸಿ ಅಜ್ಜಿಯೇ ತನ್ನ ಅಳಲನ್ನು ತಾನೇ ತೊಡಿಕೊ೦ಡಷ್ಟು ಸಹಜವಾಗಿ ಮೂಡಿಬ೦ದಿದೆ ನಿಮ್ಮ ಕವನ, ಅಭಿನ೦ದನೆಗಳು ಕಾವ್ಯ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeleteಬರೆಯೋ, ಓದೋ ಹುಮ್ಮಸ್ಸಲ್ಲಿ ಕೊಂಡಿ ಹಿಡಿದಿಡಿದು ಹೋಗುತ್ತಿದ್ದ ನಾನು ಇದನ್ನು ತಿಂಗಳ ಹಿಂದೆ ನೋಡಿದ ನೆನಪು..ಬಹುಷ: ಇಲ್ಲೇ ಕಾಣುಸ್ತು.. ಎಲ್ಲಿಂದ ಕೊಂಡಿ ಸಿಕ್ಕು ಇಲ್ಲಿಗೆ ಬಂದಿ ಅಂತ ನೆನಪಾಗ್ತಾ ಇಲ್ಲೆ.. ಕವಿತೆ ಚೆನ್ನಾಗಿದ್ದು.. ಚಿತ್ರನೂ :-)
ReplyDeleteಹಾ ಈಗ ನೆನಪಾತು ಸ್ವಲ್ಪ.. ಒಂದೇ ಚಿತ್ರಕ್ಕೆ ನಾಲ್ಕು ಜನ ಬರೆದ ಕವನಗಳು ಹೇಳಿ ಎಲ್ಲೋ ಹಾಕಿದಂಗೆ ನೆನಪು.. ಬಹುಶ ನೀವು ಹೇಳಿದ ಎರಡು ಬ್ಲಾಗಲ್ಲೇ ಒಂದರಲ್ಲಿ ಕಾಣ್ತು
ReplyDeleteತುಂಬಾ ಧನ್ಯವಾದಗಳು ಪ್ರಭಾಮಣಿ ಅವರೇ..... ನನ್ನ ಬ್ಲಾಗ್ ಗೆ ಸ್ವಾಗತ... ಪ್ರೋತ್ಸಾಹ ಹೀಗೆ ಇರಲಿ... :) :)
ReplyDeleteಧನ್ಯವಾದ, ಸ್ವಾಗತ ನನ್ನ ಪುಟಗಳಿಗೆ prashasti... ಹಮ್ ನೀವು ನೋಡಿದ್ದು ಕರಾವಳಿ ರೈಲು ಬ್ಲಾಗಿನಲ್ಲಿ.... :)
ReplyDeleteಒಂದು ಅಸಹಾಯಕ ಜೀವದ ಎದೆಯಾಳದ ಮಾತನ್ನ ಒಂದು ಕವನದ ರೂಪದಲ್ಲಿ ಬರೆಯದು ಸ್ವಲ್ಪ ಕಷ್ಟ, ಆದ್ರೆ ಈ ಕವನದಲ್ಲಿ ಭಾವನೆಗಳ ಮಹಾಪೂರ ಚೆನ್ನಾಗಿ ಮೂಡಿ ಬಂಜು.
ReplyDeleteಧನ್ಯವಾದಗಳು ದಿಲೀಪ್... ಬ್ಲಾಗ್ ಗೆ ಸ್ವಾಗತ... :)
ReplyDelete