ಮನ ತುಡಿಯಬೇಕು...
ಹೃದಯ ಮಿಡಿಯಬೇಕು.....
ಅನುರಾಗ ಅರಳಬೇಕು
ಓ ಮನವೇ....
Learn to FEEL......
ಮನಕೆ ಮನ ಜೊತೆಯಾಗಿ
ಪ್ರೀತಿಯು ಒರತೆಯಾಗಿ....
ಭಾವ ಚಿಮ್ಮಬೇಕು...
ಓ ಮನವೇ....
Learn to EXPRESS.....
ಹಂಚಿಕೋ ಮನವೇ ನಿನ್ನ ಸಂತಸ....
ಹೊಮ್ಮುವುದಾಗ ಉಲ್ಲಾಸ...
ಅರಿತುಕೋ ನಿನ್ನೊಲವಿನ ಮನಸ....
ಓ ಮನವೇ....
Learn to share the JOY.....
ಮನವೆಂಬ ತ್ರಿಜ್ಯಗಳೆರಡು ಬೆಸೆದಾಗ...
ಪ್ರೀತಿಯ ವ್ಯಾಸವದು ವಿಶಾಲ...
ಹಂಚಿಕೋ ನಿನ್ನಾಳದ ಒಲವ....
ಓ ಮನವೇ....
Learn to ENJOY....
ಕಾವ್ಯಾ :)

ಮಸ್ತಾಗಿದೆ ಮೇಡಂ ಕವಿತೆ...
ReplyDeleteಉಗಾದಿಯ ಶುಭಾಶಯಗಳು...
thank u... :) wish you the same... :)
ReplyDeleteಕಾವ್ಯಾ ..ವಿನೂತನ ಪ್ರಯೋಗ...ಚನ್ನಾಗಿದೆ ಅದರಲ್ಲೂ ನನಗೆ ಬಹಳ ಹಿಡಿಸಿದ್ದು
ReplyDeleteಮನವೆಂಬ ತ್ರಿಜ್ಯಗಳೆರಡು ಬೆಸೆದಾಗ...
ಪ್ರೀತಿಯ ವ್ಯಾಸವದು ವಿಶಾಲ...
ಹಂಚಿಕೋ ನಿನ್ನಾಳದ ಒಲವ....
ಓ ಮನವೇ....
Learn to ENJOY....
.....................
ನಾನು ಒಂದು ಚುಟುಕು ಬರೆದಿದ್ದೆ....
ಸುಮ್ಮನೆ ಪರಿಧಿಯೇಕೆ ಸುತ್ತುವೆ
ನೇರವಾಗಿ ಬಂದುಬಿಡು ಹೀಗೇ
ಗೊತ್ತಿಲ್ಲವೇ ಎರಡು ತ್ರಿಜ್ಯ ಒಂದೇ ವ್ಯಾಸ?
ಧನ್ಯವಾದ ಅಜಾದಣ್ಣ.... ಏನೋ ಅನಿಸಿತು ಗೀಚಿದೆ.... :)
ReplyDeleteಹಾಂ ಓದಿದ ನೆನಪಿದೆ ನಿಮ್ಮ ಆ ಸಾಲುಗಳನ್ನು.... :)
ಅಗಣಿತ ಪ್ರೀತಿ :) ಚಂದ ಇದ್ದು ಕಾವ್ಯ :)
ReplyDeleteಥ್ಯಾಂಕ್ ಯೂ.... ಗಣಿತ ಪ್ರೀತಿ ಅಂತು ಅಲ್ಲ... :P
Deleteಚೆಂದ ಇದ್ದು ಕವನ .. ಇಷ್ಟ ಆತು :-)
ReplyDeletethank u... :)
Deleteಸರಳ ಸಾಲುಗಳಲ್ಲಿ ದೊಡ್ಡ ಸಂದೇಶ. ಚಿಕ್ಕ ಚೊಕ್ಕ ಸಾಲುಗಳು
ReplyDelete:) :) ಧನ್ಯವಾದ.... :) :)
ReplyDeleteಕಾವ್ಯ ..ತ್ರಿಜ್ಯ ವ್ಯಾಸದ ಕಾನ್ಸೆಪ್ಟ್...ವಾವ್ ತಂಗಿ ಆಗಿದ್ದಕ್ಕೂ ಸಾರ್ಥಕ... ನನ್ನದೂ ಒಂದು ಚುಟುಕ ಇತ್ತು (ಬಹಳ ಹಿಂದೆ ಹಾಕಿದ್ದೆ)
ReplyDeleteನನ್ನೊಪ್ಪಿಗೆಯಾಯ್ತು
ಅಪ್ಪನನೊಪ್ಪಿಸಲು
ಪರಿಧಿಯೇಕೆ ಸುತ್ತುವಿ
ಬಂದುಬಿಡು ಎರಡು ತ್ರಿಜ್ಯಕೂ
ಒಂದೇ ವ್ಯಾಸ...
ಹೀಗೆ ಏನೋ...ಇತ್ತು... ಚನ್ನಾಗಿದೆ ಕಡೆಯ ಇಂಗ್ಲೀಷ್ ಬಾಟಮ್ ಪಂಚ್...
ಅಣ್ಣನ ಆಶೀರ್ವಾದ.... :)
ReplyDelete