ನೀ ಹಾಡಿ ಎನ್ನ ಲಾಲಿಸಿದಾ ಕ್ಷಣ ....
ನಿನ್ನ ತೋಳಲ್ಲಿ ಜಾರಿದಾ ಮನ ....
ತನ್ಮಯತೆಯಿತ್ತು ನಿನ್ನ ಸ್ವರದಲ್ಲಿ......
ಪ್ರೀತಿಯುಕ್ಕಿತ್ತು ನನ್ನ ನಯನದಲ್ಲಿ ......
ನಿನ್ನಾಳದ ಪ್ರೀತಿ ಮಾಡಿತೆನಗೆ ಮೋಡಿ .....
ಅನುನಯಿಸಿದೆ ನೀ ಎನ್ನ ಹಾಡಿ, ಹಾಡಿ ......
ನನ್ನ ನೀ ಬಿಟ್ಟಿರಲಾರೆಯೆಂದು ನಾ ಬಲ್ಲೆ ....
ಆದರೆ ಮನ ಬಿಚ್ಚಿ ಹೇಳಲು ನೀ ಒಲ್ಲೆ .....
ಈ ಅಕ್ಷರಗಳಿಗೆಂದೂ ನೀನೆ ಸ್ಪೂರ್ತಿ....
ಜೀವದ ಪ್ರೀತಿ ಕೊಡುವೆ ನಾ ಮನಸ್ಪೂರ್ತಿ....
ಮುದ್ದಿಸು ಬಾ ನನ್ನ ತೋಳಲ್ಲಿ ತಬ್ಬಿ....

ಸೂಪರ್ ಕಾವ್ಯಾ ... !!!
ReplyDeleteನೀ ಹಾಡಿ ಎನ್ನ ಲಾಲಿಸಿದಾ ಕ್ಷಣ ....
ನಿನ್ನ ತೋಳಲ್ಲಿ ಜಾರಿದಾ ಮನ ....
ತುಂಬಾ ಇಷ್ಟವಾದ ಸಾಲುಗಳು ... :)
ಮುದ್ದು ಗುಬ್ಬಿಯ ತುಂಬು ತೋಳುಗಳ ಪ್ರೀತಿ ಎಂದಿಗೂ ಕರಗದಿರಲಿ .. :)
ಧನ್ಯವಾದಗಳು ಸಂಧ್ಯಾ ... :) ಆ ಸಾಲುಗಳನ್ನು ಮುಂದುವರೆಸಲು ಪ್ರೇರಣೆ ನೀಡಿದ್ದಕ್ಕೂ ಕೂಡ ಥ್ಯಾಂಕ್ಸ್ :) <3
Deleteವಾರೇವ್ಹಾ...
ReplyDelete:) :)
Deleteಭಾವಗಳನ್ನು ಪ್ರಾಸಬದ್ದವಾಗಿ ಜೋಡಿಸಿದ್ದಿರಿ.. ಇಷ್ಟವಾಯಿತು...
ReplyDeleteಏನೋ ಸಣ್ಣ ಪುಟ್ಟ ಪ್ರಯತ್ನಗಳು .... :) ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು ... :)
Delete>> ನನ್ನ ನೀ ಬಿಟ್ಟಿರಲಾರೆಯೆಂದು ನಾ ಬಲ್ಲೆ ....
ReplyDeleteಆದರೆ ಮನ ಬಿಚ್ಚಿ ಹೇಳಲು ನೀ ಒಲ್ಲೆ ..... <<
ಎಷ್ಟೋ ಸಲ ಪ್ರೀತಿ ಹಿಂಗೇ ಇರ್ತು ಅಲ್ದಾ ? .. ಇಬ್ರಿಗೂ ವಿಪರೀತ ಪ್ರೀತಿ.. ಅವ ಹೇಳಲಿ ಹೇಳಿ ಇವ, ಇವ ಹೇಳಲಿ ಹೇಳಿ ಅವ.. ಪರಸ್ಪರ ಪ್ರೀತಿಯ ಅರಿವಿದ್ರೂ ಮಾತಿಲ್ಲ.. ಕಣ್ಣ ನೋಟ, ಮೌನವೇ ಎಲ್ಲಾ.. ಚೆಂದಿದ್ದು :-)
ಧನ್ಯವಾದ ಪ್ರಶಸ್ತಿ... :)
Deleteಹಮ್ ಹೌದು... ಆದ್ರೂ ಪ್ರೀತಿ ಇದ್ದು ಅಂದಮೇಲೆ ಅದ್ನ ಅವ್ರ ಮೌನದಲ್ಲೇ ಅರ್ಥ ಮಾಡ್ಕ್ಯಳ ಮನಸಿದ್ರೆ ಸಾಕು ಅಲ್ದ ... :)
Tumba dinada nantra bardiddu :) Keep writing.
ReplyDeleteha ha ha... Thank u KiNNa.... :) hmm lahari bandaga time irtille... sumne kuntaga lahari battille heLantha paristiti namdu... :P
Deletehha hha.. houdu..kavanada gatte adu... chennaagide nimma kavana...bereyavara blog ge bheTi koDi....
DeleteThank you sir... :)
Deleteಪ್ರೀತಿಯನ್ನು ಅಕ್ಷರಗಳಲ್ಲಿ ಪೋಣಿಸಿದ ರೀತಿ ತುಂಬಾ ಚೆನ್ನಾಗಿದೆ.ಸೊಗಸಾದ ಕವನ.
ReplyDeleteಧನ್ಯವಾದಗಳು :)
Deleteನನ್ನ ಬ್ಲಾಗಿಗೂ ಭೇಟಿ ಕೊಡಿ ಒಂದು ವಿಭಿನ್ನ ಕಥೆ ನಿಮಗಾಗಿ ಕಾದಿದೆ.
Deleteಈ ಅಕ್ಷರಗಳಿಗೆಂದೂ ನೀನೆ ಸ್ಪೂರ್ತಿ....
ReplyDeleteಜೀವದ ಪ್ರೀತಿ ಕೊಡುವೆ ನಾ ಮನಸ್ಪೂರ್ತಿ
ಆಹಹಾ ಅಂತಹ ಭಾವತುಂಬಿದ ಪದಗಳು... ತುಂಬಾ ದಿನಗಳ ನಂತರ ನೋಡಿದರೂ ಭಾವಕ್ಕೆ ಎಟಕುವಂತಹ ಬಾಣದ ರೀತಿಯ ಪದ ಪ್ರಯೊಗ ಭಾವನೆಗೆ ಮುದ ನೀಡುತ್ತದೆ.
ಇನ್ನು ಒಳ್ಳೆಯ ಭಾವಗೀತೆಗಳು ಹರಿಯಲಿ. ಚೆನ್ನಾಗಿದೆ... ಮುಂದುವರೆಸಿರಿ.
ಹೃತ್ಪೂರ್ವಕ ಧನ್ಯವಾದಗಳು .... :)
Deleteಸಾಧ್ಯವಾದರೆ ನಮ್ಮ ಲೋಕಕ್ಕು ಭೇಟಿಕೊಡಿ.
Deleteಬಹಳ ದಿನಗಳ ನಂತರ ನಿಮ್ಮ ಬ್ಲಾಗಿಗೆ... ಜೀವನದಲ್ಲಿ ಸ್ನೇಹ ಅನಿವಾರ್ಯ ಆದರೆ ಅದನ್ನು ಹೇಳಿಕೊಳ್ಳಲು ಮುಜುಗರ ಲ್ವಾ...
ReplyDeleteನನ್ನ ನೀ ಬಿಟ್ಟಿರಲಾರೆಯೆಂದು ನಾ ಬಲ್ಲೆ ....
ಆದರೆ ಮನ ಬಿಚ್ಚಿ ಹೇಳಲು ನೀ ಒಲ್ಲೆ .....
ಈ ಸಾಲುಗಳಲ್ಲಿ ಅದೇ ಬಿಂಬ...
ಇಷ್ಟ ಆಯ್ತು ಕಾವ್ಯ
ಧನ್ಯವಾದಗಳು ಅಜಾದಣ್ಣ .... :)
Delete