Tuesday, January 20, 2015

ಆ ದಿನ :

      ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..

     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

************
ವಿಧಿ ವರ : 

    ಗಾಢ ಸ್ನೇಹದ ಮಧ್ಯೆ ಅರಿವಿಲ್ಲದೇ ಪ್ರೀತಿ ಇಣುಕಿತ್ತು... ಇಬ್ಬರ ಮನಸ್ಸೂ ಹೇಳಲಾರದ ಅನಿವಾರ್ಯತೆಯಿಂದ ತಳಮಳಿಸಿತ್ತು... ಅದೊಂದು ದಿನ ತಡೆಯಲಾರದ ದುಃಖ ಪ್ರೀತಿಯನ್ನು ಇಬ್ಬರಿಂದಲೂ ಏಕಕಾಲಕ್ಕೆ ಹೊರಹಾಕಿತ್ತು... ಆಗದ ಮಾತೆಂದು ತಿಳಿದ ಇಬ್ಬರಲ್ಲೂ ದುಃಖ ಭೋರ್ಗರೆದು, ಅಸಹಾಯಕತೆ ಕಣ್ಣೀರ ಕೋಡಿಯಾಗಿ ಹರಿದಿತ್ತು. ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಮತ್ತದೇ ಹಳೆಯ ನಗು ಮೊಗದ ಮುಖವಾಡ ಹೊತ್ತರು... ಮೊದಲಿನಿಂದಲೂ ವಿಧಿಯ ಕರಾಳ ಮುಖದ ಅರಿವಿದ್ದಿದ್ದರಿಂದ ದಿನೇ ದಿನೇ ತಮ್ಮ ಮುಖವಾಡಕ್ಕೆ ಹೊಂದಿಕೊಂಡುಬಿಟ್ಟರು..
     ಈ ಬಾರಿ ವಿಧಿ ಕೂಡ ಅವರ ಪ್ರೀತಿಗೆ ತಲೆ ಬಾಗಿತ್ತು... ಧಿಡೀರನೆ ಮನೆಯಿಂದ "ನಿಮ್ಮಿಬ್ಬರ ಜಾತಕಗಳು ಹೊಂದುತ್ತವೆ ನಮಗೆ ಒಪ್ಪಿಗೆ... ನೀವೇನೆನ್ನುತ್ತೀರಿ..." ಎಂದು ಫೋನಾಯಿಸಿದಾಗ  ಅದಕ್ಕೆ ಉತ್ತರವನ್ನೂ ಹೇಳದೆ ಓಡಿ ಬಂದ ಅವನು ಅವಳ ಮುಂದೆ ನಿಂತು, ಪ್ರೀತಿಯಿಂದ ತಂದ ಗುಲಾಬಿಯನ್ನು ಅವಳ ಕೈಗಿಟ್ಟು ಹಣೆಗೊಂದು ಹೂಮುತ್ತನ್ನಿತ್ತಿದ್ದ.... 

(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗಥೆಗಳು)

ಕಾವ್ಯಾ :) 

8 comments:

  1. ಆ ದಿನ: ಅದೃಷ್ಟ ಎಂದರೆ ಇದೇ ಅಲ್ಲವೇ!
    ವಿಧಿ ವರ: ಎಲ್ಲ ಪ್ರೇಮಿಗಳ ಬಾಳಲೂ ಇಂತದೇ ಅಮೃತಗಳಿಗೆ ಬರಲಿ.

    ReplyDelete
  2. ನಾಯಿಸ್ ;-) ನಾಯೀಸ್ ಅಲ್ಲ ಮತ್ತೆ ;-)

    ReplyDelete
  3. ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಕತೆಗಳಿಗೊಂದು ಅಭಿನಂದನೆ ಕೂಡ :-)

    ReplyDelete
  4. nice one...!!!

    could you please once visit ammanahaadugalu.blogspot.com and share your opinion/suggestions.

    ReplyDelete